ಮೊಳಕೆಯೊಡೆದ ಯಾವುದಾದರು ಕಾಳು ತಿನ್ನಿ ನಿಮ್ಮ ಆರೋಗ್ಯ ವೃದ್ಧಿಸುತ್ತದೆ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೀರ ಅಲ್ವೆ. ಅದರಲ್ಲೂ ಮೊಳಕೆಯೊಡೆದ ಹೆಸರು ಕಾಳಿನಲ್ಲಿ ಏನೆಲ್ಲಾ ಆಡಗಿದೆ ಅಂದ್ರೆ.

ಮೊಳಕೆಯೊಡೆದ ಕಾಳಿನಲ್ಲಿ ಕ್ಯಾಲೋರಿಸ್ ಇಲ್ಲದಿರುವುದರಿಂದ ಎಷ್ಟೇ ತಿಂದರೂ ದೇಹದ ತೂಕ ಹೆಚ್ಚಾಗುವುದಿಲ್ಲ. 
ಮೊಳಕೆಯೊಡೆದ ಕಾಳು ಸೇವಿಸುವುದರಿಂದ ಇದರಲ್ಲಿನ ಒಮೆಗಾ ಫ್ಯಾಟೀ ಆಸಿಡ್ ದೇಹಕ್ಕೆ ಕೊಬ್ಬಿನಂಶ ಒದಗಿಸಿ ರಕ್ತನಾಳ ಕಾಪಾಡಿ ಹೃದಯದ ಆರೋಗ್ಯ ಚೆನ್ನಾಗಿಡುತ್ತದೆ. 

ವಿಟಮಿನ್ ಸಿ ದೇಹಕ್ಕೆ ಸೋಂಕು ತಗಲುವುದನ್ನು ತಡೆದು, ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡುತ್ತದೆ.
 ಕಾಳಿನಲ್ಲಿಯ ಪೋಷಕಾಂಶ ಜೀರ್ಣಕ್ರಿಯೆಯನ್ನು ಉತ್ತಮಪಡಿಸಿ, ಮಲಬದ್ಧತೆ ತೊಂದರೆ ನಿವಾರಿಸುತ್ತದೆ.  ಹಾಗಾದ್ರೆ ನಿತ್ಯ ಮೊಳಕೆ ಕಟ್ಟಿದ ಹೆಸರು ಕಾಳನ್ನು ತಿನ್ನಿ ಆರೋಗ್ಯವನ್ನು ವೃದ್ಧಸಿಕೊಳ್ಳಿ.!