ಬೆಂಗಳೂರು: ಈಚೆಗೆ ಮೊಣಕಾಲು ನೋವು ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಈ ಸಮಸ್ಯೆ ಹೆಚ್ಚು ಭಾರ ಮತ್ತು ಬೊಜ್ಜಿನ ಶರೀರದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಮೊಣಕಾಲಿನ ಗಂಟಿಗೆ ಬೀಳುವ ಭಾರ ತೀವ್ರ ನೋವಿಗೆ ಕಾರಣವಾಗುತ್ತದೆ.

ಈ ಸಮಸ್ಯೆ ಇರುವವರು ನೀರನ್ನು ಕುಳಿತುಕೊಂಡೆ ಕುಡಿಯಬೇಕು. ನಿಂತು ನೀರು ಕುಡಿದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಬೇವಿನ ಎಲೆಗಳನ್ನು ತಿನ್ನುವ ಮೂಲಕ ರಕ್ತ ಸ್ವಚ್ಚಗೊಳಿಸಿ. ಇದು ಸಕ್ಕರೆ ಕಾಯಿಲೆ ಸಹ ನಿಯಂತ್ರಿಸುತ್ತದೆ.

ಸ್ವಲ್ಪ ಅಕ್ಕಿಯನ್ನು ಚೀಲದಲ್ಲಿ ತುಂಬಿ ಐಸ್ ಅಲ್ಲಿ ಇಟ್ಟು ತಣ್ಣಗಾಗಿಸಿ. – ಮೊಣಕಾಲು ಮತ್ತು ಪಾದವನ್ನು ವಿಶ್ರಮಿಸಲು ಬಿಡಿ. ಬಳಿಕ ಹೆಪ್ಪುಗಟ್ಟಿರುವ ಅಕ್ಕಿ ಚೀಲವನ್ನು ಮೊಣಕಾಲಿನ ಮೇಲೆ ಇರಿಸಿ. – ನೋವಿನ ಜಾಗದಲ್ಲಿ ಸ್ವಲ್ಪ ಸಮಯದ ತನಕ ಉಳಿಯಲು ಬಿಡಬೇಕು. – ಹೀಗೆ ತರಕಾರಿಗಳನ್ನು ಸಹ ತಣ್ಣಗಾಗಿಸಿ ಮೊಣಕಾಲಿನ ಮೇಲೆ ಇಡಬಹುದು. – ಈ ಚಿಕಿತ್ಸೆ ಪಡೆಯುವಾಗ ಒಡಾಡಬಾರದು. ಪಾದವನ್ನು ಮೇಲಕ್ಕೇರಿಸಿ ಇಟ್ಟಿರುವ ವಿಧಾನದಲ್ಲಿ ಇರಬೇಕು.