ಮೂಲಂಗಿ ಸೊಪ್ಪು. ಇಲ್ಲಪ್ಪ ಸೊಪ್ಪು ಕಿತ್ತು ನಾವು ಮೂಲಂಗಿ ಅಷ್ಟೆ ತರುವುದು. ಇಲ್ಲಾಂದ್ರೆ ತೂಕ ಜಾಸ್ತಿ ಆಗುತ್ತೆ ಅದಕ್ಕೆ.

ಬಹುತೇಕ ಪ್ಯಾಟೆ ಮಂದಿ ಮೂಲಂಗಿ ತೆಗೆದುಕೊಂಡ್ರೆ ಸೊಪ್ಪು ಕಿತ್ತು ಮೂಲಂಗಿ ಮಾತ್ರ ತರುತ್ತಾರೆ.

ಆದ್ರೆ ಮೂಲಂಗಿ ಜೊತೆ ಸೊಪ್ಪುನಲ್ಲೂ  ನಮ್ಮ ದೇಹಕ್ಕೆ ಬೇಕಾದ ಹಲವು ಪೋಷಕಾಂಶಗಳ ಆಗರವೇ ಇದೆ. ಎಂಬುದು ಗೊತ್ತಿದ್ದರು ಸಹ ಸೊಪ್ಪು ಬಿಸಾಕುತ್ತವೆ. ತಡ್ರಿ ಮೂಲಂಗಿ ಸೊಪ್ಪಿನಿಂದ ಏನು ರೆಸೆಪಿ ಮಾಡಬಹುದು.?

ಹಾಗಾದರೆ ಮೂಲಂಗಿ ಸೊಪ್ಪಿನ ರೆಸಪಿ ಮಾಡುವುದು ಹೇಗೆ ಅಂದ್ರೆ ಮೊದಲು ಹಸಿ ಸೊಪ್ಪನ್ನು ನೀರಿನಲ್ಲಿ ತೊಳೆದು ಸಣ್ಣಗೆ ಹಚ್ಚಿಕೊಳ್ಳಿ ಅದಕ್ಕೆ ಸಣ್ಣಗೆ ಹಸಿ ಈರುಳ್ಳಿ ಹಚ್ಚಿ, ಒಂದು ಅಥವ ಎರಡು ಹಸಿ ಮೆಣಸಿನಕಾಯಿ ಸಣ್ಣಗೆ ಹಚ್ಚಿ.ಸೊಪ್ಪಿನ ಜೊತೆಗೆ ಎರಡನ್ನು ಕಲೆಸಿ. ಬೇಕಾದರೆ ಹಸಿ ತುರಿದ ಕೊಬ್ಬರಿ ಹಾಕಬಹುದು. ಈ ರೆಸಿಪಿಯನ್ನು ಚಪಾತಿಗೆ ಅಥವ ರೊಟ್ಟಿ ಜೊತೆ ಇಲ್ಲಾವಾದರೆ ಅನ್ನದ ಜೊತೆ ನಂಚಿಕೊಂಡು ತಿನ್ನಿ ಆಗ ನಿಮ್ಮ ಆರೋಗ್ಯದಲ್ಲಿ ಹಲವು ಬದಲಾವಣೆ ಕಾಣುತ್ತೀರ.

ಬೆಳಿಗ್ಗೆ ಮೋಶನ್ ಆಗುತ್ತದೆ. ರಕ್ತ ವೃದ್ಧಿಆಗುತ್ತದೆ. ಇನ್ನಕೆ ತಡ ಮೂಲಂಗಿ ಸೊಪ್ಪು ಬಿಟ್ಟು ಬರುವ ಬದಲು ಹಸಿ ಸೊಪ್ಪು ತಿಂದರೆ ಸರಿ ಅಲ್ವೆ