ಮೂಲಂಗಿಯಲ್ಲಿರುವ ಔಷಧಿಗುಣಗಳು ಯಾವವು.?

ಮೂಲಂಗಿಯಲ್ಲಿ ಯಾವ ಯಾವ ಪೋಷಕಾಂಶಗಳು ಇವೆ ಎಂಬುದರ ಬಗ್ಗೆ ತಿಳಿದಿತ್ತು ಅಲ್ವ ಈಗ ಮೂಲಂಗಿಯಲ್ಲಿ ಯಾವ ಯಾವ ಔಷಧೀಯ ಗುಣಗಳು ಇವೆ ಎಂಬುದ ಬಗ್ಗೆ ಮಾಹಿತಿ ನಿಮಗಾಗಿ.

ಮಲಬದ್ಧತೆ: ಸೇವಿಸಿದ ಆಹಾರ ಪದಾರ್ಥಗಳು ಸುಲಭವಾಗಿ ಜೀರ್ಣವಾಗುವುದರಿಂದ ಮಲಬದ್ಧತೆ ಉಂಟಾಗುವುದಿಲ್ಲ.

ಬಹೂಪಯೋಗಿ ಮೂಲಂಗಿ: ಹಸಿ ಮೂಲಂಗಿಯ ಸೇವನೆಯಿಂದ ಮೂಲವ್ಯಾಧಿಯ ತೊಂದರೆ ಹತೋಟಿಗೆ ಬರುವುದು. ಕಣ್ಣಿನ ನರಗಳಿಗೆ ಶಕ್ತಿ ಬರುವುದು. ವೀರ್ಯವೃದ್ಧಿಯಾಗುವುದು.

ಕಣ್ಣಿನ ನರಗಳಿಗೆ ಶಕ್ತಿ: ಹಸಿ ಮೂಲಂಗಿಯ ಸೇವನೆಯಿಂದ ಕಣ್ಣಿನ ನರಗಳಿಗೆ ಶಕ್ತಿ ಬರುವುದು.

ಶರೀರದ ಉಷ್ಣತೆ: ಕೆಂಪು ಮೂಲಂಗಿಯನ್ನು ಚೆನ್ನಾಗಿ ಹುರಿದು ಹೆಸರುಬೇಳೆ ಕೋಸಂಬರಿಯ ಜೊತೆ ಕಲೆಸಿ ಸೇವಿಸಿದರೆ ಶರೀರದ ಉಚ್ಛತೆ ಕಡಿಮೆಯಾಗುವುದು.

ಬಿಕ್ಕಳಿಕೆ: ಕೆಂಪು ಮೂಲಂಗಿಯ ಬೇರನ್ನು ಎದೆ ಹಾಲಿನಲ್ಲಿ ತೇಯ್ದು ಮೂಗಿನ ಹೊಳ್ಳೆಯೊಳಗೆ ನಶ್ಯದಂತೆ ಎಳೆದುಕೊಂಡರೆ ಬಿಕ್ಕಳಿಕೆಯ ಸಮಸ್ಯೆ ದೂರವಾಗುವುದು.

ಚೇಳು ಕುಟುಕಿದಾಗ: ಚೇಳು ಕುಟುಕಿದಾಗ ಚೇಳು ಕುಟುಕಿದಾಗ ಮೂಲಂಗಿ ಹಾಗೂ ಸ್ವಲ್ಪ ಅನ್ನು ಬೆರೆಸಿ ಜಜ್ಜಿ ಕುಟುಕಿದ ಭಾಗಕ್ಕೆ ಶಾಂತವಾಗುವುದು. ಕುಟುಕಿದ ಭಾಗಕ್ಕೆ ಹಚ್ಚಿದರೆ ಉರಿ ಶಮನವಾಗುವುದು.

ಹೊಟ್ಟೆಯಲ್ಲಿ ಉರಿ: ಕೆಂಪು ಮೂಲಂಗಿಯ ರಸವನ್ನು ಬಿಳಿ ಮೂಲಂಗಿಯ ರಸದೊಂದಿಗೆ ಬೆರಸಿ ಕುಡಿಯುವುದರಿಂದ ಹೊಟ್ಟೆಯ ಉರಿ ಶಾಂತವಾಗುತ್ತದೆ

ಮುಟ್ಟಿನ ತೊಂದರೆ: ಮುಟ್ಟು ಆಗದೆ ಬಹಳ ದಿನ ನಿಂತಿದ್ದರೆ ಮೂಲಂಗಿ ಬೀಜ, ಮೆಂತ್ಯ ಈ ಮೂರನ್ನು ಸಮ ಪ್ರಮಾಣದಲ್ಲಿ ಮಿಶ್ರಮಾಡಿ ರುಚಿ ಚೂರ್ಣ ತಯಾರಿಸಿಕೊಳ್ಳಬೇಕು. ಈ ಚೂರ್ಣವನ್ನು ಪ್ರತಿ ದಿನ ಚಮಚದಷ್ಟು ಸೇವಿಸುತ್ತಿದ್ದಂತೆ ರಜಸ್ಸು ಪ್ರಾರಂಭವಾಗುತ್ತದೆ.

ನೆಗಡಿ: ಹಸಿ ಮೂಲಂಗಿಯ ಕೋಸಂಬರಿ ಮಾಡಿ ಪದೇ ಪದೇ ತಿನ್ನುತ್ತಿದ್ದರೆ ನೆಗಡಿ ದೂರವಾಗುವುದು.

ಕೆಂಪು ಮೂಲಂಗಿ: ಕೆಂಪು ಮೂಲಂಗಿಯ ಸೇವನೆಯಿಂದ ಲೈಂಗಿಕ ಸಾಮರ್ಥ್ಯ ಹೆಚ್ಚಾಗುವುದು. ಊಟದ ನಂತರ ಕೆಂಪು ಮೂಲಂಗಿಯನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲುಗಳು ಸ್ವಚ್ಚವಾಗುತ್ತದೆ ಹಾಗೂ ಬಾಯಿಯ ದುರ್ಗಂಧ ದೂರವಾಗುವುದು. ಜೀರ್ಣಶಕ್ತಿಯು ವೃದ್ಧಿಸುತ್ತದೆ.

.