ಬಾಳೆಹಣ್ಣಿನಲ್ಲಿ ಪೊಟಾಷಿಯಂ ಅಂಶ ಹೆಚ್ಚು ಇರುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ನಮ್ಮ ಮೆದುಳಿನಲ್ಲಿರುವ ಸೆರೊಟೋನಿನ್ ಅಂಶ ಒಂದು ವೇಳೆ ಕಡಿಮೆಯಾದರೆ ನಮಗೆ ಒತ್ತಡದ ಅನುಭವವಾಗುತ್ತದೆ. ಬಾಳೆಹಣ್ಣು ಇದರ ಸಮತೋಲನ ಕಾಪಾಡುತ್ತದೆ.

ದೇಹಕ್ಕೆ ಆವಶ್ಯಕ ೧೨%ರಷ್ಟು ಫೈಬರ್ ಅಂಶವನ್ನು ಬಾಳೆಹಣ್ಣು ಒದಗಿಸುತ್ತದೆ, ಈ ಮೂಲಕ ಅನಾವಶ್ಯಕ ತೂಕ ಇಳಿಸಿಕೊಳ್ಳಬಹುದು. ಮೊಳೆಗಳಿಗಾಗಿ ಕ್ಯಾಲ್ಸಿಯಂ ಒದಗಿಸಿ ಅವನ್ನು ಸದೃಢಗೊಳಿಸುತ್ತವೆ. ಹಾಗಾಗಿ ದಿನಕ್ಕೊಂದು ಬಾಳೆಹಣ್ಣು ತಿನ್ನಲು ಮರೆಯಬೇಡಿ. ಆದರೆ ಸಕ್ಕರೆ ಖಾಯಿಲೆ ಇದ್ದವರು ಒಮ್ಮೆ ಡಾಕ್ಟರ್ ಕೇಳಿ..!