ಬ್ರಹ್ಮ ಮುಹೂರ್ತದ ವೇಳೆ ಅಥವಾ ಬೆಳಗ್ಗೆ ಸ್ನಾನ ಮಾಡುವುದು ಆದರ್ಶ ಸಮಯ ಎನ್ನಲಾಗಿದೆ. ಕೆಲವರಿಗೆ ಈ ಸಮಯದಲ್ಲಿ ಸ್ನಾನ ಮಾಡುವುದು ಸಾಧ್ಯವಾಗದು. ಅಂತವರು ಸೂರ್ಯೋದಯದ ಬಳಿಕ ಎಷ್ಟು ಬೇಗ ಸ್ನಾನ ಮಾಡಲು ಸಾಧ್ಯವೋ ಅಷ್ಟು ಬೇಗನೆ ಸ್ನಾನ ಮಾಡಿಕೊಳ್ಳಿ. ಬೆಳಗ್ಗೆ ವಾಯುಮಂಡಲದಲ್ಲಿ ಸಾತ್ವಿಕ ಲಹರಿಗಳು ಹೆಚ್ಚಿರುತ್ತವೆ. ನೀರಿನಲ್ಲಿರುವ ಆಪ್ ತತ್ವ ದೇಹದ ಸ್ಪರ್ಶವಾದಾಗ ದೇಹಕ್ಕೆ ಸಾತ್ವಿಕ ಲಹರಿ ಆಕರ್ಷಿಸಲು ಸುಲಭವಾಗುತ್ತದೆ. ಹಾಗಾಗಿ ಬೆಳಗ್ಗೆ ಸ್ನಾನ ಮಾಡಿದರೆ ದೇಹ ಸಾತ್ವಿಕವಾಗುತ್ತದೆ.