ಬೆಲ್ಲ ತಿನ್ನುವುದರಿಂದ ಏನಾಗುತ್ತೆ.? (ಭಾಗ-3)

  1. ದೇಹ ಸ್ವಚ್ಛಗೊಳಿಸುವುದು:

ಬೆಲ್ಲ ಒಂದು ಅತೀ ಸಹಜವಾದ ದೇಹ ಸ್ವಚ್ಛಗೊಳಿಸುವ ಸಾಧನ. ಹೀಗಾಗಿ ಬೆಲ್ಲ ಸೇವಿಸುವುದು ದೇಹದಿಂದ ಅನಗತ್ಯ ಕಣಗಳನ್ನು ನಿವಾರಿಸುತ್ತದೆ. ಶ್ವಾಸಕೋಶ, ಶ್ವಾಸನಾಳ, ಕರುಳು, ಹೊಟ್ಟೆ ಮತ್ತು ಅನ್ನನಾಳವನ್ನು ಸ್ವಚ್ಛಗೊಳಿಸುತ್ತದೆ. ಅತೀ ಮಾಲಿನ್ಯವಿರುವ ಜಾಗದಲ್ಲಿ ಕೆಲಸ ಮಾಡುವವರು ಬೆಲ್ಲ ತಿನ್ನುವುದು ಉತ್ತಮ.

  1. ಋತುಸ್ರಾವದ ನೋವು:*

ಬೆಲ್ಲ ತಿನ್ನುವುದರಿಂದ ಹಲವು ಪೌಷ್ಠಿಕಾಂಶಗಳನ್ನು ದೇಹಕ್ಕೆ ನೀಡುವ ಕಾರಣ ಋತುಸ್ರಾವದ ನೋವಿಗೆ ಇದು ಉಪಶಮನ. ಋತುಸ್ರಾವದ ಸಮಯದಲ್ಲಿ ಮನೋಸ್ಥಿತಿಯಲ್ಲಿ ಬದಲಾವಣೆಯಾಗುತ್ತಿದ್ದಲ್ಲಿ ಬೆಲ್ಲ ತಿನ್ನಿ. ಇದು ಪಿಎಂಎಸ್ ಚಿಹ್ನೆಗಳ ಜೊತೆಗೆ ಹೋರಾಡಿ ಎಂಡೋರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಎಂಡೋರ್ಫಿನ್‌ಗಳು ದೇಹಕ್ಕೆ ಆರಾಮ ಕೊಡುತ್ತದೆ.

  1. ಅನೀಮಿಯದಿಂದ ರಕ್ಷಣೆ:*

ಬೆಲ್ಲದಲ್ಲಿ ಕಬ್ಬಿಣ ಮತ್ತು ಫೊಲೇಟ್ ಇರುವ ಕಾರಣ ರಕ್ತದ ಕೋಶಗಳ ಪ್ರಮಾಣವನ್ನು ಸಾಮಾನ್ಯ ಸ್ಥಿತಿಯಲ್ಲಿ ಇಡುತ್ತದೆ. ಗರ್ಭಿಣಿ ಮಹಿಳೆಯರಿಗೆ ಉತ್ತಮ.

  1. ಕರುಳಿನ ಆರೋಗ್ಯ:*

ಬೆಲ್ಲದಲ್ಲಿ ಮೆಗ್ನೇಶಿಯಂ ಹೆಚ್ಚಿರುವ ಕಾರಣ ಕರುಳಿನ ಆರೋಗ್ಯಕ್ಕೆ ಉತ್ತಮ. 10 ಗ್ರಾಂ ಬೆಲ್ಲದಲ್ಲಿ 16 ಮಿಲಿಗ್ರಾಂ ಮೆಗ್ನೇಶಿಯಂ ಇರುತ್ತದೆ.

  1. ಹೊಟ್ಟೆಗೆ ತಂಪು :*

ಬೆಲ್ಲ ಸಾಮಾನ್ಯ ದೇಹದ ಉಷ್ಣತೆ ಕಾಪಿಡಲು ನೆರವಾಗುತ್ತದೆ. ಬೆಲ್ಲದ ತಂಪು ನೀರು ಕುಡಿಯುವುದು ಬೇಸಿಗೆಗೆ ಉತ್ತಮ.

ಸಂಗ್ರಹ