ಲೇಡಿಸ್ ಫಿಂಗರ್ ಎಂದು ಕರೆಸಿಕೊಳ್ಳುವ ಬೆಂಡೆಕಾಯಿಂದ ತಯಾರಿಸುವ ಬೆಂಡೆಕಾಯಿ ಹುಳಿ, ಬೆಂಡೆ ಫ್ರೈ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಈ ಬೆಂಡೆಕಾಯಿ ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಅನೇಕ ಉಪಯೋಗಗಳು ಇವೆ.

ಜಿಡ್ಡಿನಾಂಶದ ಬೆಂಡೆಕಾಯಿ ಬಾಯಿಗಷ್ಟೇ ರುಚಿಯಲ್ಲ, ಆರೋಗ್ಯಕ್ಕೂ ಒಳ್ಳೆಯದು. ಇದನ್ನು ಸೇವಿಸುವುದರಿಂದ ದೊಡ್ಡ ಕರುಳಿನ ಕ್ಯಾನ್ಸರ್, ಮಲಬದ್ಧತೆ ದೂರವಾಗಿ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಹಿಮೋಗ್ಲೋಬಿನ್ ಅಂಶ ಹೆಚ್ಚಿ ರಕ್ತಹೀನತೆ ದೂರವಾಗುತ್ತದೆ. ತೂಕ ಇಳಿಸಿಕೊಳ್ಳುವವರು, ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಬೆಂಡೆಕಾಯಿ ಹೇಳಿ ಮಾಡಿಸಿದ ತರಕಾರಿಯಾಗಿದೆ. ಇದರಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯಾಘಾತವನ್ನು ತಡೆಯುತ್ತದೆ.!