ಕೊಬ್ಬು ಕರಗಿಸುವ ಗುಣಹೊಂದಿದೆ. ಇದು ರಕ್ತನಾಳ ಮತ್ತು ನರಗಳನ್ನು ಶಕ್ತಿಯುತವಾಗಿಸುತ್ತದೆ.  ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮಲಬದ್ಧತೆ ನಿವಾರಿಸುತ್ತದೆ. ಕರುಳಿನ ಹುಣ್ಣಿಗೆ ಉತ್ತಮ ಔಷಧಿ. ದೇಹದ ತೂಕ ಇಳಿಸಿಕೊಳ್ಳಲು ಸಹಕಾರಿ.

ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಸಹಕಾರಿ. ಇದರ ತೈಲವನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಸೋಂಪಾಗಿ ಬೆಳೆಯುತ್ತದೆ.ಒಂದು ಚಮಚ ಹಸುವಿನ ತುಪ್ಪಕ್ಕೆ ಒಂದು ಚಿಟಿಕೆ ಜೇಷ್ಠಮಧು ಪುಡಿ ಮತ್ತು 30 ಮಿಲಿ ಬೂದು ಕುಂಬಳಕಾಯಿ ರಸವನ್ನು ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ನೆನೆಪಿನ ಶಕ್ತಿ ಹೆಚ್ಚುತ್ತದೆ.

ಮೂಗಿನಿಂದ ರಕ್ತಸ್ರಾವ ಆಗುತ್ತಿದ್ದರೆ ಬೂದುಕುಂಬಳಕಾಯಿ ರಸಕ್ಕೆ ಬೆಟ್ಟದ ನಲ್ಲಿಕಾಯಿ ರಸವನ್ನು ಸೇರಿಸಿ ಸೇವಿಸಿದರೆ ರಕ್ತಸ್ರಾವ ನಿಲ್ಲುತ್ತದೆ.ಬೂದು ಕುಂಬಳಕಾಯಿ ಬೀಜದ ಸಿಪ್ಪೆ ತೆಗೆದು ಸಿಹಿ ಮಜ್ಜಿಗೆ ಜತೆ ಕಡಿದು ಅದಕ್ಕೆ ನೀರು ಬೆರೆಸಿ ದಿನಕ್ಕೆ 2 ಬಾರಿ ಸೇವಿಸಿದರೆ ಮೂತ್ರಪಿಂಡದ ಕಲ್ಲುಗಳು ನಿವಾರಣೆಯಾಗುತ್ತವೆ.

ಚರ್ಮದ ಉರಿ ಇದ್ದರೆ ಬೂದು ಕುಂಬಳಕಾಯಿ ತಿರುಳು ಮತ್ತು ಎಲೆಗಳನ್ನು ಪೇಸ್ಟ್‌ ಮಾಡಿ ಚರ್ಮಕ್ಕೆ ಲೇಪ ಮಾಡಿದರೆ ಉರಿ ಶಮನವಾಗುತ್ತದೆ.ಬೂದು ಕುಂಬಳಕಾಯಿ ಬೀಜದ ಸಿಪ್ಪೆ ತೆಗೆದು ಕೊಬ್ಬರಿ ಎಣ್ಣೆ ಜತೆ ಕುದಿಸಿ ಆ ಎಣ್ಣೆಯನ್ನು ತಲೆಗೆ ಪ್ರತಿ ದಿನ ಹಚ್ಚಿದರೆ ತಲೆ ಹೊಟ್ಟು ನಿವಾರಣೆಯಾಗುತ್ತದೆ.