ಕೆಲವರು ಬೀಟ್ ರೂಟ್ ಬಗ್ಗೆ ಮೂಗು ಮುರಿಯುವವರು ಇದ್ದಾರೆ. ಆದರೆ ಬೀಟ್ ರೂಟ್ ಬಹುಪಯೋಗಿ ಮನೆಮದ್ದಾಗಿದೆ. ಎಂಬುದು ಕೆಲವರಿಗೆ ಗೊತ್ತಿಲ್ಲ. ಗೊತ್ತಾದರೆ ,ಆತ್ರ ಬಿಡಲ್ಲ.

ಬೀಟ್ ರೂಟ್ ನಲ್ಲಿ ಆರೋಗ್ಯಕ್ಕೆ ಅಗತ್ಯವಾದ ಕಬ್ಬಿಣದ ಅಂಶ ಹೆಚ್ಚಿರುತ್ತದೆ, ಜೊತೆಗೆ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನೂ ಹೆಚ್ಚಿಸುತ್ತದೆಯಲ್ಲದೆ, ಮಲಬದ್ಧತೆ ಸಮಸ್ಯೆಗೂ ಇದು ರಾಮಬಾಣವಾಗಿದೆ. ರಕ್ತ ಹೀನತೆ ಮತ್ತು ಕ್ಯಾನ್ಸರ್ ತಡೆಯುವಲ್ಲಿಯೂ ಸಹಕಾರಿಯಾದ ಬೀಟ್ ರೂಟ್, ಡಯೆಟ್ ಮಾಡುವವರೂ ಕೂಡ ಬಳಸಬಹುದಾದ ಉತ್ತಮ‌ ತರಕಾರಿ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.!