ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ, ಹೊಟ್ಟೆ ಊದಿಕೊಳ್ಳುವುದು, ನೋವು ಎಲ್ಲವೂ ದೂರವಾಗುತ್ತದೆ. ಬಿಸಿನೀರಿನಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ ಮತ್ತು ಚರ್ಮ ಬೇಗನೆ ಸುಕ್ಕಾಗುವುದಿಲ್ಲ.

ದೇಹದಲ್ಲಿನ ಟಾಕ್ಸಿನ್ ಗಳನ್ನು ಹೊರಹಾಕಲ್ಪಡುತ್ತದೆ, ಹಸಿವನ್ನು ಉತ್ತೇಜಿಸುತ್ತದೆ, ಚಯಾಪಚಯ ಕ್ರಿಯೆ ಸುಲಭವಾಗುತ್ತದೆ, ಮೂತ್ರಪಿಂಡ ಮತ್ತು ಲಿವರ್ ಕಾರ್ಯ ಉತ್ತಮವಾಗುತ್ತದೆ. ಅಲ್ಲದೇ, ಮುಟ್ಟಿನ ನೋವು ಕೂಡ ದೂರಮಾಡುತ್ತದೆ.!

ತಾಮ್ರ ದೇಹಕ್ಕೆ ಬೇಕಾಗುವ ಅಲ್ಪ ಪ್ರಮಾಣದ ಅಗತ್ಯ ಖನಿಜಗಳಲ್ಲಿ ಒಂದಾಗಿದೆ. ತಾಮ್ರದ ಪಾತ್ರೆಯಲ್ಲಿ ಊಟ ಮಾಡುವುದು ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಸದೃಢವಾಗಿರುತ್ತದೆ. ಇದು ಕೆಂಪು ರಕ್ತಕಣಗಳನ್ನು ಮತ್ತು ಕೊಲ್ಯಾಜೆನ್ ಗಳನ್ನು ನಿರ್ಮಿಸಲು ಅಗತ್ಯ. ಅಲ್ಲದೇ ಆಹಾರದಿಂದ ದೇಹಕ್ಕೆ ಅಗತ್ಯವಿರುವ ಶಕ್ತಿಯ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಜೀರ್ಣಾಂಗ ವ್ಯವಸ್ಥೆ, ಕೊಬ್ಬು ಕರಗುವಿಕೆಗೆ, ಜೀರ್ಣ ವ್ಯವಸ್ಥೆ, ರಕ್ತದೊತ್ತಡ ನಿಯಂತ್ರಣಕ್ಕೆ, ಹೃದಯದ ಬಡಿತ ಕ್ರಮಬದ್ಧಗೊಳಿಸಲು ಉತ್ತಮವಾಗಿದೆ.