ಬೇಸಿಗೆಯಲ್ಲಿ ಬಾಯಾರಿಕೆ ನೀಗಿಸುವುದು ಕಲ್ಲಂಗಡಿ ಹಣ್ಣು. ಆದರೆ ಈ ಕಲ್ಲಂಗಡಿ ಹಣ್ಣಿನಲ್ಲಿ ಯಾವ ಯಾವ ಪೋಷಕಾಂಶಗಳು ಇವೆ.

ಕಲ್ಲಂಗಡಿ ಹಣ್ಣಿನಲ್ಲಿ ಶೇಕಡ 92 ರಷ್ಟು ನೀರಿನಾಂಶವಿದ್ದು, ನಮ್ಮ ಶರೀರಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಕಲ್ಲಂಗಡಿಯಲ್ಲಿ ವಿಟಮಿನ್‌ ಸಿ ಅಂಶವಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಾಮಾನ್ಯ ಅಲರ್ಜಿಯನ್ನು ತಡೆಯಲು ಸಹಾಯ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿರುವ ಬಿ ವಿಟಮಿನ್‌ಗಳಿಂದ ಬೇಸಿಗೆಯಲ್ಲಿ ದೇಹದಲ್ಲಿ ಆಗುವಂತಹ ಆಯಾಸವನ್ನು ದೂರ ಮಾಡುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ಹಾಗಾದರೆ ಬೇಸಿಗೆಯಲ್ಲಿ ಈ ಹಣ್ಣು ಎತೇಚ್ಚವಾಗಿ ತಿನ್ನ ಬಹುದು ಆರೋಗ್ಯವನ್ನು ವೃದ್ಧಿಸಿಕೊಳ್ಳ ಬಹುದು.