ಇತ್ತೀಚೆಗೆ ಹೋಟಲ್ ಗೆ ಹೋಗಿ ಗ್ರೀನ್ ಟೀ ಕೊಡಿ ಅಂತನೋ, ಲೆಮನ್ ಟೀ ಕೋಡಿ ಅಂತ ಕೇಳಿದ್ರೆ, ಆ ಟೀಯಲ್ಲಿ ಪುದಿನ ಸೊಪ್ಪಿನ ಎಲೆಯೊಂದು ಹಾಕಿ ಕೊಡುತ್ತಾರೆ. ಟೀ ಜೊತೆಗೆ ಪುದಿನ ಎಲೆಯನ್ನು ತಿನ್ನುತ್ತೇವೆ. ಆದ್ರೆ ಆಪುದಿನ ಸೊಪ್ಪಿನ ಮಹತ್ವ ಏನು, ಏಕೆ ಬಳಸ ಬೇಕು ಎಂಬುದನ್ನು ಓದಿ.

ಪುದೀನಾವು ಒ೦ದು ಗಿಡಮೂಲಿಕೆಯಾಗಿದ್ದು,ಅದರ ಔಷಧೀಯ ಗುಣಗಳು ಶತಶತಮಾನಗಳಷ್ಟು ಹಿ೦ದೆಯೇ ಆವಿಷ್ಕರಿಸಲ್ಪಟ್ಟವು.ಇ೦ದು,ಪುದಿನಾವನ್ನು ಉಸಿರಿನ ಮೂಲಕ ಒಳತೆಗೆದುಕೊಳ್ಳುವ ಔಷಧಗಳು ಪೇಸ್ಟ್ ಗಳು, ಅ೦ಟುಗಳು ಇವೇ ಮೊದಲಾದ ಹಲಬಗೆಯ ಉತ್ಪನ್ನಗಳಲ್ಲಿ ಬಳಕೆ ಆಗುತ್ತದೆ.

ಅಜೀರ್ಣದ ಸಮಸ್ಯೆ, ಗ್ಯಾಸ್ಟ್ರಿಕ್ ಮುಂತಾದ ಹೊಟ್ಟೆಯ ತೊಂದರೆಗಳಿಗೆ ಪುದೀನದ ಬಳಕೆಯು ಅತ್ಯಂತ ಪರಿಣಾಮಕಾರಿಯಾಗಿದೆ. ಪುದೀನದಲ್ಲಿ ಹೆಚ್ಚು ಪ್ರಮಾಣದ ಕ್ಯಾಲೋರಿಗಳಿಲ್ಲದ ಕಾರಣ ಇದರ ಸೇವನೆಯಿಂದ ಬೊಜ್ಬರುವುದಿಲ್ಲ.

ಪುದಿನ ಸೊಪ್ಪಿನಲ್ಲಿ ಅತೀ ಹೆಚ್ಚು ಪ್ರಮಾಣದ ಪೊಟ್ಯಾಷಿಯಂ ಅಂಶವನ್ನು ಹೊಂದಿರುವುದರಿಂದ  ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಸ್ನಾಯುಗಳನ್ನು ಸಡಿಲಗೊಳಿಸುವ ವಿಶೇಷ ಗುಣವನ್ನು ಹೊಂದಿದೆ. ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ, ಫೊಸ್ಪರಸ್, ಜೀವಸತ್ವ ಸಿ, ಜೀವಸತ್ವ ಎ ಹೊಂದಿರುವ ಪೋಷಕಾಂಶಗಳ ಆಗರವಾಗಿರುವ ಪುದೀನದ ಬಳಕೆಯು ಆರೋಗ್ಯಯುತವಾಗಿ ಜೀವನ ನಡೆಸಲು ಅನುವು ಮಾಡಿಕೊಡುತ್ತದೆ. ಮಕ್ಕಳಲ್ಲಿ ಕೆಮ್ಮು, ಕಫ, ಶೀತ, ನೆಗಡಿ, ಅಲರ್ಜಿ,ಅಸ್ತಮ ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಕುದಿಯುತ್ತಿರುವ ಬಿಸಿನೀರಿಗೆ ಒಂದು ಹಿಡಿಯಷ್ಟು ಪುದೀನ ಸೊಪ್ಪು, ಅರ್ಧಚಮಚ ಜೀರಿಗೆ, ಕಾಲು ಚಮಚ ಒಣಶುಂಠಿ ಪೌಡರ್ ಹಾಕಿ ಇನ್ನೂ ಕುದಿಸಬೇಕು. ಅದಕ್ಕೆ ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಬೇಕು. ನಂತರದಲ್ಲಿ ಕಷಾಯವನ್ನು ಇಳಿಸಿ, ಗ್ಲಾಸಿಗೆ ಹಾಕಿ ಅದಕ್ಕೆ ಲಿಂಬು ರಸವನ್ನು ಹಾಕಿ ಕುಡಿಯಬೇಕು. ಇದರಿಂದಾಗಿ ಅಜೀರ್ಣ ಸಮಸ್ಯೆ ಹಾಗೂ ಹೊಟ್ಟೆಯ ಇತರ ಸಮಸ್ಯೆಗಳೂ ಸಹ ಉಪಶಮನವಾಗುತ್ತದೆ.