ನೆಲಗಡಲೆಯಲ್ಲಿ ಕೊಬ್ಬು, ಪ್ರೊಟೀನ್, ಪೊಟಾಶಿಯಂ, ನಾರಿನಾಂಶ, ಪೋಸ್ಪರಸ್, ವಿಟಮಿನ್ ಬಿ ಮತ್ತು ಮೆಗ್ನಿಶಿಯಂ ಇದೆ. ಇದರಿಂದಾಗಿ ನೆಲಗಡಲೆಯನ್ನು ಒಂದು ಆರೋಗ್ಯಕಾರಿ ತಿಂಡಿ ಎಂದು ಪರಿಗಣಿಸಲಾಗಿದೆ.

ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ. ಹೃದಯ ಸಮಸ್ಯೆಗಳು ದೂರವಾಗುತ್ತದೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಬೆನ್ನು ನೋವು ನಿವಾರಣೆಯಾಗಲು ಸಹಕಾರಿಯಾಗಿದೆ.