ಬಹುಶಃ ನುಗ್ಗೆ ಗಿಡ ಹೆಚ್ಚು ಮಳೆ ಬೀಳುವ ಪ್ರದೇಶಲ್ಲಿ ಬೆಳೆಯುವ ಗಿಡವಲ್ಲಾ. ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಅತೀ ಹೆಚ್ಚಾಗಿ  ಬೆಳೆಯುತ್ತದೆ. ನುಗ್ಗೆ ಗಿಡದಲ್ಲಿ ಹಲವಾರು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ನುಗ್ಗೆ ಕಾಯಿ, ನುಗ್ಗೆ ಹೂ ಹಾಗೂ ನುಗ್ಗೆ ಸೊಪ್ಪು ಎಲ್ಲವೂ ಆರೋಗ್ಯ ಹೆಚ್ಚು ಪ್ರೋಟೀನ್ ಅಂಶಗಳನ್ನು ಒಳಗೊಂಡಿದೆ.

ನುಗ್ಗೆ ಸೊಪ್ಪಿನಲ್ಲಿ ಮಧುಮೇಹ ನಿವಾರಕ ಗುಣಗಳಿವೆ. ನುಗ್ಗೆಸೊಪ್ಪು ದೇಹದಲ್ಲಿನ ಇನ್ಸುಲಿನ್‌ ಪ್ರಮಾಣವನ್ನು ಹೆಚ್ಚಿಸಲು ಪ್ರಚೋದನೆ ನೀಡುತ್ತದೆ. ನುಗ್ಗೆ ಸೊಪ್ಪಿನಲ್ಲಿ ಜೈವಿಕ ಕ್ರಿಯೆ ಉತ್ತಮಗೊಳಿಸುವ ರಾಸಾಯನಿಕಗಳಿದ್ದು, ಹೆಚ್ಚಿನ ಆ್ಯಂಟಿ ಆಕ್ಸಿಡೆಂಟು ಗುಣವಿದೆ. ಇವು ಫ್ರೀ ರಾರ‍ಯಡಿಕಲ್‌ ಕಣಗಳ ವಿರುದ್ಧ ಹೋರಾಡುವ ಮೂಲಕ ಘಾಸಿಯನ್ನು ತಡೆಯುತ್ತವೆ. ಮಧುಮೇಹದ ನಿಯಂತ್ರಣದಲ್ಲಿ ಈ ಗುಣ ಮಹತ್ತರದ್ದಾಗಿದೆ. ಹಾಗೂ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣವಿದೆ. ನುಗ್ಗೆ ಸೊಪ್ಪು ಹೆಚ್ಚಿನ ತೂಕವನ್ನು ಕಳೆದುಕೊಳ್ಳಲು ನೆರವಾಗುತ್ತದೆ.

ಇಷ್ಟೇಲ್ಲಾ ಗುಣವಿರುವ ನುಗ್ಗೆ ಗಡವನ್ನು ಮನೆಯ ಹಿತ್ತಲಲ್ಲಿ ಬೇಳಸಬಹುದು. ಅದರಲ್ಲೂ ಜವಾರಿ ಗಿಡ ಇನ್ನೂ ಉತ್ತಮ ಆಗಾದರೆ ಇನ್ನೇಕ ತಡ.