ಕೆಲವರು ನುಗ್ಗೆ ಎಲ್ಲೆ ತಿನ್ನಲ್ಲಪ್ಪ ಅಂತ ಹೇಳುತ್ತಾರೆ. ಇನ್ನೂ ಕೆಲವರು ಬೆಂಡೆ ಕಾಯಿ ತಿನ್ನಲ್ಲಪ್ಪ ಅಂತ ಹೇಳುವವರು ಇದ್ದಾರೆ. ಹಾಗಾದರೆ ನುಗ್ಗೆ ಎಲೆ ಹಾಗೂ ಬೆಂಡಕಾಯಿಂದ ತಿನ್ನುವುದರಿಂದ ನಮ್ಮ ದೇಹಕ್ಕೆ ಏನೆಲ್ಲಾ ಪೋಷಕಾಂಶಗಳು ಸಿಗಲಿವೆ ಎಂಬುದು ತಪ್ಪದೆ ಓದಿ.!

  1. ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಗೊಳಿಸಿ ತೂಕ ಇಳಿಯಲು ಸಹಕಾರಿ
  2. ಕಾಂತಿಯುಕ್ತ ತ್ವಚೆ ಪಡೆಯಲು ಸಹಾಯಕ 3. ಸುಸ್ತು ನಿವಾರಿಸಿ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ
  3. ನಿದ್ದೆಯ ಆವರ್ತನವನ್ನು ನಿಯಂತ್ರಿಸಲು ನೆರವು
  4. ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ
  5. ಮಧುಮೇಹದ ಸಾಧ್ಯತೆ ಕಡಿಮೆಗೊಳಿಸುತ್ತದೆ
  6. ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ
  7. ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವು
  8. ಜೀರ್ಣಕ್ರಿಯೆಗೆ ಸಹಕಾರಿ
  9. ಮೆದುಳನ್ನು ಆರೋಗ್ಯಕರವಾಗಿರಿಸುತ್ತದೆ.

 

ಹೃದಯ ಸಂಬಂಧಿ ಕಾಯಿಲೆಗೆ ಬೆಂಡೆಕಾಯಿ ಮದ್ದು

ಜಿಡ್ಡಿನಾಂಶದ ಬೆಂಡೆಕಾಯಿ ಬಾಯಿಗಷ್ಟೇ ರುಚಿಯಲ್ಲ, ಆರೋಗ್ಯಕ್ಕೂ ಒಳ್ಳೆಯದು. ಇದನ್ನು ಸೇವಿಸುರುವುದರಿಂದ ದೊಡ್ಡ ಕರುಳಿನ ಕ್ಯಾನ್ಸರ್, ಮಲಬದ್ಧತೆ ದೂರವಾಗಿ ಜೀರ್ಣಕ್ರಿಯೆ ಸುಲಭವಾಗುತ್ತದೆ.

ಇದನ್ನು ತಿನ್ನುವುದರಿಂದ ಹಿಮೋಗ್ಲೋಬಿನ್ ಅಂಶ ಹೆಚ್ಚಿ ರಕ್ತಹೀನತೆ ದೂರಾಗುತ್ತದೆ. ತೂಕ ಇಳಿಸಿಕೊಳ್ಳುವವರು, ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಬೆಂಡೆಕಾಯಿ ಹೇಳಿ ಮಾಡಿಸಿದ ತರಕಾರಿ.

ಇದರಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯಾಘಾತವನ್ನು ತಡೆಯುತ್ತದೆ.