ಈ ಹಿಂದೆಲ್ಲಾ ಹಳ್ಳಿ ಮಂದಿಯವರು ಸ್ನಾನ ಮಾಡುವಾಗ ತಮ್ಮ ಕೂದಲಿಗೆ ಕಡ್ಲೆ ಬೇಳೆ ಹಿಟ್ಟನ್ನ( ಬೋಂಡ ಮಾಡುವ ಹಿಟ್ಟು)   ನೀರಿನಲ್ಲಿ ಕಲೆಸಿಕೊಂಡು ಸ್ನಾನ ಮಾಡುತ್ತಿದ್ದರು. ತಲೆಯಲ್ಲಿ ಹೊಟ್ಟು ಇರಲಿಲ್ಲ.

ಆಗ ಯಾವ ಶಾಂಪ್ ಇರಲಿಲ್ಲವಾದ್ದರಿಂದ ತಲೆಯಲ್ಲಿನ ಹೊಟ್ಟಿನ ಸಮಸ್ಯೆ ಇರಲಿಲ್ಲ . ಸ್ವಲ್ಪ ಮುಂದುವರೆದಂತೆ ಸೀಗೇಕಾಯಿ ತಲೆಗೆ ಹಚ್ಚುತ್ತಿದ್ದರು. ಆಗಲೂ ಸಹ ಹೊಟ್ಟಿನ ಸಮಸ್ಯೆ ಕಾಡಲಿಲ್ಲ.

ಯಾವಾಗ ಶಾಂಪು ಬಂತು ಆಗಿನಿಂದ ತಲೆಯಲ್ಲಿ ಹೊಟ್ಟು ಜಾಸ್ತಿ ಆಯಿತು. ಕೂದಲು ಬೆಳ್ಳಗೆ ಬರಹತ್ತಿದವು. ಕಪ್ಪು ಕೂದಲು ಮಾಡಿಕೊಳ್ಳುವುದಕ್ಕೆ ಬೇರೆ ಬೇರೆ ಕಂಪನಿಯ ಮಾಲು ಮಾರ್ಕೆಟ್ ಗೆ ಬಂದವು.

ಹಾಗಾಗಿ ನಿಮ್ಮತಲೆ ಕೂದಲು ಫಳ ಫಳ ಅಂತ ಹೊಳೆಯಲು ಮತ್ತೆ ಸೀಗೆಕಾಯಿ ಅಥವ ಕಡ್ಲೆ ಬೇಳೆ ಹಿಟ್ಟನ್ನ( ಬೋಂಡ ಮಾಡುವ ಹಿಟ್ಟು)  ಬಳಸಿ ತಲೆ ಕೂದಲನ್ನು ಆರೋಗ್ಯವಾಗಿ ಕಾಣುವಂತೆ ಮಾಡಿಕೊಳ್ಳಿ.