ಹಿಂದೆಲ್ಲಾ ಸಕತ್ ಆಗಿ ಊಟ ಮಾಡಿ ತೇಗುತ್ತಿದ್ದರು ಮತ್ತು ಆರೋಗ್ಯದಿಂದ ಇರುತ್ತದರು ಅಲ್ವ ಈಗ ಕಾಲ ಬದಲಾಗಿದೆ.

ಮೈ ಬಗ್ಗಿಸಿ ದುಡಿಯುವುದಕ್ಕಿಂತಲೂ ಮೈಂಡ್ ಕೆಲಸ ಮಾಡಿ ದುಡಿಮೆ ಮಾಡುವ ಕಾಲದಲ್ಲಿ ನಿಮ್ಮ ಊಟ ಮೀತವಾಗಿದ್ದರೆ ಏನು ಉಪಯೋಗ ಅಂತ ಅಮೇರಿಕದ ಸಂಶೋಧಕರು ಹೇಳಿದ್ದಾರೆ. ರೋಗಬಾಧೆಯಿಲ್ಲದ ಸಂತಸದ ಬದುಕು ನಿಮ್ಮದಾಗಬೇಕಿದ್ದರೆ ಕಡಿಮೆ ತಿನ್ನಿ.

40 ವರ್ಷದೊಳಗಿನ ಆಯ್ದ ಕೆಲವರಿಗೆ ನಿತ್ಯವೂ ಸೇವಿಸುತ್ತಿದ್ದ ಆಹಾರದ ಪ್ರಮಾಣಕ್ಕಿಂತ ಶೇ 15ರಷ್ಟು ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವಂತೆ ಸೂಚಿಸಲಾಗಿತ್ತು.
ಎರಡು ವರ್ಷ ಕಡಿಮೆ ಆಹಾರ ಸೇವಿಸಿದ್ದ ಈ ಜನರು ಹೆಚ್ಚು ಕ್ರಿಯಾಶೀಲರಾಗಿದ್ದು ಸಂಶೋಧನೆಯಲ್ಲಿ ಕಂಡು ಬಂದಿತು.

ಹೆಚ್ಚು ಕ್ಯಾಲೊರಿಯುಕ್ತ ಆಹಾರ ಸೇವಿಸಿದಾಗ ಜೀರ್ಣಕ್ರಿಯೆಗೆ ದೇಹ ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಆದರೆ, ಕಡಿಮೆ ಕ್ಯಾಲೊರಿ ಆಹಾರ ಸೇವಿಸಿದಾಗ ದೇಹ ದಣಿಯದೇ ಉಲ್ಲಾಸಕರವಾಗಿ ಇರುತ್ತದೆ. ಇದು ತ್ವಚೆಯ ಮೇಲೂ ಪರಿಣಾಮ ಬೀರುತ್ತದೆ. ಆಗ ದೇಹ ಬೇಗ ವಯಸ್ಸಾಗುವುದನ್ನು ತಡೆಯಬಹುದು ಎಂದು ಸಂಶೋಧಕರು ಹೇಳಿದ್ದಾರೆ. ‘ಕಡಿಮೆ ತಿಂದರೆ ಜಾಸ್ತಿ ಅವಧಿ ತನಕ ಬದುಕುಬಹುದು’ ಎಂದು ಸಂಶೋಧನೆಯ ಅಂತಿಮ ಫಲಿತಾಂಶದಲ್ಲಿ ಕಂಡುಕೊಳ್ಳಲಾಗಿದೆ.

ಹಾಗಾದರೆ ಇನ್ನೇಕೆ ತಡ ಬಾಯಿರುಚಿಗೆ ಸಕತ್ ಆಗಿ ಊಟಮಾಡುವುದು ಕಡಿಮೆ ಮಾಡಿ ಮಿತವಾಗಿ ಆಹಾರ ಸೇವನೆ ನಿಮ್ಮದಾಗಲಿ ಹೆಚ್ಚು ಆರೋಗ್ಯವಂತರಾಗಿರಿ.