ಏನು ಊಟ ಮಾಡಬೇಕು ಹೇಗೆ ತಿನ್ನ ಬೇಕು. ಎಷ್ಟು ನೀರು ಕುಡಿಯ ಬೇಕು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹಿಂದೆಲ್ಲಾ ಇಂತದ್ದೇ ಊಟ. ಹೀಗೆ ಇರಬೇಕು. ಇಷ್ಟು ನೀರು ಕುಡಿಬೇಕು ಎಂದು ಹಿರಿಯಲು ಹೇಳುತ್ತಿದ್ದರು. ಆದ್ರೆ ಕಾಲ ಬದಲಾಗಿದೆ. ತಂಗಳು ಪೆಟ್ಟಿಗೆ ( ಫ್ರೀಡ್ಜ್) ಬಂದಿದೆ ನಮ್ಮ ಊಟದ ಮೆನುಗಳು ಬದಲಾಗಿವೆ. ಇರುವುದರಲ್ಲೂ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಬೇಡವೇ.?

-ಸಂ

ಫ್ರಿಡ್ಜ್ ನಿಂದ ಹೊರತೆಗೆದ ಆಹಾರ ಪದಾರ್ಥಗಳನ್ನು, ಒಂದು ಗಂಟೆಯ ನಂತರ ಉಪಯೋಗಿಸಬೇಕು.
ಕುಳಿತುಕೊಂಡು ಊಟ ಮಾಡಬೇಕು, ಮಧ್ಯಾನ್ಹ ಹೊಟ್ಟೆ ತುಂಬಾ ಊಟ ಮಾಡಬೇಕು.
ತಂಪು ಪಾನೀಯವನ್ನು ಸೇವಿಸಲೇ ಬಾರದು., ಮಾಡಿದ ಅಡುಗೆ ಬಿಸಿಯಾಗಿರುವಾಗಲೇ 40 ನಿಮಿಷಗಳ ಒಳಗೆ ತಿನ್ನಬೇಕು.
.ಊಟವಾದ ನಂತರ 5-10 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು.
ಬೆಳಿಗ್ಗೆ 8.30 ರ ಒಳಗೆ ಉಪಹಾರವನ್ನು ಸೇವಿಸಬೇಕು.
ಬೆಳಗಿನ ಉಪಹಾರದೊಂದಿಗೆ ಹಣ್ಣಿನ ರಸವನ್ನು ಕುಡಿಯಬೇಕು.
ಉಪಹಾರದ ನಂತರ ತಪ್ಪದೇ ಕೆಲಸ ಮಾಡಬೇಕು.
ಮಧ್ಯಾನ್ಹದ ಒಳಗೆ 2-3 ಲೋಟ ನೀರು ಕುಡಿಯಬೇಕು.
ಊಟ ಮಾಡುವ 48 ನಿಮಿಷಗಳ ಮೊದಲು ನೀರು ಸೇವಿಸಬೇಕು.
ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು.
ಮಧ್ಯಾನ್ಹದ ಸಾಂಬಾರಿನಲ್ಲಿ ಓಮ ಪುಡಿಯನ್ನು ಉಪಯೋಗಿಸಬೇಕು.
ಮಧ್ಯಾನ್ಹ ಹೊಟ್ಟೆ ತುಂಬಾ ಊಟ ಮಾಡಬೇಕು.