ಪ್ರಸ್ತುತ ದಿನಮಾನಗಳಲ್ಲಿ ಪ್ರೋಟೀನ್ ಕೊರತೆಯಿಂದ ಹಲವಾರು ಸಮಸ್ಯೆಗಳು ಕಾಡುತ್ತಿವೆ. ಇದರ ಕೊರತೆಯಿಂದ ಪಾರಾಗಲು ಪ್ರೋಟೀನ್ ಯುಕ್ತ ಆಹಾರ ಸೇವನೆ ಅವಶ್ಯಕ. ಸಸ್ಯಾಹಾರಿಗಳು ಪ್ರೋಟೀನ್ ಕೊರತೆ ನೀಗಿಸಲು ಮೊಳಕೆ ಕಾಳುಗಳು ಸೇವಿಸಬೇಕು.

ಮೊಳಕೆ ಕಾಳುಗಳನ್ನು ಬೇಯಿಸಿ ಸೇವಿಸುವುದರಿಂದ ದೇಹಕ್ಕೆ ಪೋಷಕಾಂಶ, ನರಗಳ ಕ್ರಿಯೆ ಚುರುಕು, ಚರ್ಮದ ಆರೋಗ್ಯ, ರೋಗ ನಿರೋಧಕ ಶಕ್ತಿ ವೃದ್ಧಿ, ಕಣ್ಣಿನ ಆರೋಗ್ಯಕ್ಕೆ ಉತ್ತಮ, ಅಧಿಕ ರಕ್ತದೊತ್ತಡ ಹತೋಟಿಗೆ ತರುತ್ತವೆ. ಮಕ್ಕಳಿಗೂ ಕಾಳು ನೀಡುವುದು ಒಳ್ಳೆಯದು.