ಬೆಂಗಳೂರು: ಆರೋಗ್ಯದ ದೃಷ್ಟಿಯಿಂದ ಮೊಸರು ಒಳ್ಳೆಯದು. ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ಪ್ರೋಟಿನ್ ಹಾಗೂ ಘಟ್ ಬ್ಯಾಕ್ಟೀರಿಯಾ ಇರುತ್ತದೆ. ಮೊಸರನ್ನು ಮಜ್ಜಿಗೆ ಮಾಡಿ ಮತ್ತು ಸಕ್ಕರೆ ಬೆರೆಸಿ ಕುಡಿದರೆ ದೇಹಕ್ಕೆ ತಂಪು, ಹೊಟ್ಟೆ ನೋವು, ಮಲ ವಿಸರ್ಜನೆ, ಅಲ್ಸರ್ ಸಮಸ್ಯೆ ದೂರಾಗುತ್ತದೆ.

ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಮೂಳೆಗಳು ಮಾತ್ರವಲ್ಲದೆ ಹಲ್ಲುಗಳನ್ನು ಗಟ್ಟಿಗೊಳಿಸುತ್ತದೆ. ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ, ಮೂತ್ರಪಿಂಡ, ದೇಹದ ಕೊಲೆಸ್ಟ್ರಾಲ್ ಸಮಸ್ಯೆ ದೂರಾಗುತ್ತದೆ.