ಶ್ರಾವಣ ಮಾಸ ಶುಭದ ಮಾಸ. ಶ್ರಾವಣ ಮಾಸದಲ್ಲಿ ತುಳಸಿ ಗಿಡವನ್ನು ನೆಡವುದರಿಂದ ಶುಭ ಉಂಟಾಗುತ್ತದೆ. ವಾಸ್ತು ಪ್ರಕಾರ ತುಳಸಿ ಗಿಡವನ್ನು ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ನೆಡುವುದು ಒಳ್ಳೆಯದು.

ಇದು ಮನೆಯನ್ನು ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ಮಾಡುತ್ತದೆ. ತುಳಸಿ ಗಿಡದ ಅಕ್ಕ ಪಕ್ಕ ಬಾಳೆ ಗಿಡ ನೆಟ್ಟರೆ, ಮತ್ತಷ್ಟು ಒಳ್ಳೆಯದು ಎಂಬ ನಂಬಿಕೆಯಿದೆ. ಇದರಿಂದ ಸಂಪತ್ತು, ಧಾನ್ಯ ವೃದ್ಧಿಯಾಗುವುದು. ತುಳಸಿ ಗಿಡ ಮನೆ ಮುಂದೆ ಇದ್ದರೆ ಶುಭ ಉಂಟಾಗುತ್ತದೆ.