ಪಪ್ಪಾಯಿ ಹಣ್ಣು ತಿಂದ್ರೆ ಬಹಳ ಹೀಟು ಅಂತ ಹೇಳುವುದು ಸಹಜ ಆದ್ರೆ ಹೊಟ್ಟೆಯ ಕೊಬ್ಬು ಕರಗಿಸುವುದಕ್ಕೆ ಹಾಗೂ ತೂಕನಷ್ಟಕ್ಕೆ ಪಪ್ಪಾಯಿ ಹಣ್ನು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಇದು ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿದ್ದು, ಹೆಚ್ಚಿನ ಪ್ರಮಾಣದ ಫೈಬರ್ ಮತ್ತು ಜೀರ್ಣಕಾರಿ ಕಿಣ್ವಗಳು ಪ್ರೋಟೀನ್ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಈ ಎಲ್ಲಾ ವೈಶಿಷ್ಟ್ಯಗಳು ತ್ವರಿತ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

ಪಪ್ಪಾಯಿ ತೂಕ ಇಳಿಸಿಕೊಳ್ಳಲು ಜನಪ್ರಿಯವಾಗಿರುವ ಒಂದು ಹಣ್ಣಾಗಿದೆ. ಇದು ವರ್ಷಪೂರ್ತಿ ಲಭ್ಯವಿರುವ ಹಣ್ಣಾಗಿದ್ದು, ಇದರಲ್ಲಿ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು, ಅಗತ್ಯ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿದೆ. ಇನ್ನು ಪಪ್ಪಾಯಿ ಜೀರ್ಣಕ್ರಿಯೆ ಮತ್ತು ನಿರ್ವಿಶೀಕರಣ ಯಕೃತ್ತಿಗೆ ಉತ್ತಮ ಹಣ್ಣು ಎಂದು ತಿಳಿದುಬಂದಿದೆ. ಹೊಟ್ಟೆಯ ಕೊಬ್ಬನ್ನು ತೊಡೆದುಹಾಕಲು ಪಪ್ಪಾಯ ಹೆಚ್ಚು ಸಹಾಯ ಮಾಡುತ್ತದೆ ಎನ್ನಲಾಗಿದೆ. ಇದನ್ನು ಲಘು ಆಹಾರವಾಗಿ ಸೇವಿಸಬಹುದು, ಸಲಾಡ್‌ಗಳು ಆಗಿ ಕೂಡ ಸೇವನೆ ಮಾಡಬಹುದಾಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಪಪ್ಪಾಯಿಯನ್ನು ತಿನ್ನಬಹುದಾಗಿದೆ.

ಪಪ್ಪಾಯಿಯಲ್ಲಿ ಪ್ರೋಟೀನ್ಗಳ ಜೀರ್ಣಕ್ರಿಯೆಗೆ ಸಹಾಯ ಮಾಡುವ ಜೀರ್ಣಕಾರಿ ಕಿಣ್ವವಾದ ಪಪೈನ್ ಇದೆ. ಹೊಟ್ಟೆಯ ಆಮ್ಲ ಕಡಿಮೆ ಇರುವವರಿಗೆ ಇದು ಸಹಾಯ ಮಾಡುತ್ತದೆ.