ಏಲಕ್ಕಿ ಅಡುಗೆಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ಬಾಯಿ ಹುಣ್ಣು ಗುಣವಾಗಲು ಏಲಕ್ಕಿ ಪುಡಿಗೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಉಪಶಮನವಾಗುತ್ತದೆ

1 ಚಿಟಿಕೆ ಏಲಕ್ಕಿ ಪುಡಿ, 1 ಚಮಚ ಅರಿಶಿಣ ಪುಡಿಯನ್ನು 1 ಲೋಟ ಹಾಲಿನೊಂದಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ರಕ್ತ ಹೀನತೆ ನಿವಾರಣೆಯಾಗುತ್ತದೆ.

ಆ್ಯಸಿಡಿಟಿ ನಿವಾರಣೆಗೆ ಒಂದೆರಡು ಏಲಕ್ಕಿ ಪುಡಿ ಮಾಡಿ ಬಿಸಿನೀರಿನಲ್ಲಿ ಹಾಕಿ ಕುದಿಸಿ ನಂತರ ಕುಡಿಯಬೇಕು. ನಿಯಮಿತವಾಗಿ ಏಲಕ್ಕಿ ಸೇವಿಸಿದರೆ ರೋಗ ನಿರೋಧಕ ಶಕ್ತಿ, ಜೀರ್ಣಶಕ್ತಿ ವೃದ್ಧಿಸುತ್ತದೆ.!