ಇಂದಿನ ಯಾಂತ್ರಿಕ ಬದುಕಲ್ಲಿ ಸಕ್ಕರೆ ನಿದ್ದೆ ಎಂಬುದು ಮಾಯವಾಗಿದೆ. ಹಾಗಾಗಿ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದೇವೆ. ಹಾಗಾದ್ರೆ ನಿತ್ಯ ಎಷ್ಟು ಹೊತ್ತು ನಿದ್ದೆಮಾಡಬೇಕು ಎಂಬುದು ಸಹ ದೊಡ್ಡ ಪ್ರಶ್ನೆ ಆಗಿದೆ.

ಈ ಪ್ರಪಂಚದಲ್ಲಿ ನಮ್ಮ ಜನಕ್ಕೆ ಮಧ್ಯಾಹ್ನ ಅಲ್ಲ ರಾತ್ರಿ ಕೂಡ ನಿದ್ದೆ ಮಾಡಲು ಸಮಯ ಸಿಗುತ್ತಿಲ್ಲ.ನಿದ್ದೆ ಮಾಡಿದರೆ ನಮ್ಮ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ ಹಾಗು ನಿದ್ದೆ ಆಯಾಸವನ್ನು ನೀಗುಸುತ್ತದೆ.ಮತ್ತು ಚೆನ್ನಾಗಿ ನಿದ್ದೆ ಮಾಡಿದರೆ ನಮ್ಮ ದೇಹ ತುಂಬಾ ಆಕ್ಟಿವ್ ಆಗಿರುತ್ತದೆ. ಆದ್ದರಿಂದ ಮಧ್ಯಾಹ್ನದ ಹೊತ್ತು ಮಲಗುವುದು ಆರೋಗ್ಯದ ದೃಷ್ಟಿಯಲ್ಲಿ ಸರಿ ಎನ್ನುತ್ತಾರೆ ವೈದ್ಯರು. ಆದರೆ ಅದು 1 ಗಂಟೆಯಿಂದ 2 ಗಂಟೆಗೆ ಮಾತ್ರ ಸೀಮಿತವಾಗಿರಬೇಕು, ಮಧ್ಯಾಹ್ನದ ಸಮಯ ಅತಿಯಾಗಿ ನಿದ್ದೆ ಮಾಡುವುದರಿಂದ ಸೋಮಾರಿತನ ಕಾಡುತ್ತದೆ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿರುತ್ತದೆ.

ಬೆಳಗಿನ ಜಾವ ಬೇಗನೆ ಎದ್ದು, ಮನೆಗೆಲಸವನ್ನೆಲ್ಲಾ ಮಾಡಿ, ಅಡುಗೆ ಮಾಡಿ, ಮಕ್ಕಳನ್ನ ಶಾಲೆಗೆ ಸಿದ್ದ ಮಾಡಿ ಕಳಿಸಿ, ಪತಿಗೆ ಡಬ್ಬಿಯಲ್ಲಿ ಊಟವನ್ನ ಕಟ್ಟಿ ಕಚೇರಿಗೆ ಕಳಿಸುವಷ್ಟರಲ್ಲಿ ಗೃಹಿಣಿಯರಿಗೆ ನಕ್ಷತ್ರಗಳು ಕಾಣಿಸುತ್ತಿರುತ್ತವೆ. ಈ ಕಾರಣಕ್ಕಾಗಿ ಗೃಹಿಣಿಯರು ಈ ಕೆಲಸಗಳನ್ನೆಲ್ಲಾ ಮಾಡಿ ಮುಗಿಸಿದ ಮೇಲೆ, ಮಕ್ಕಳು ಶಾಲೆಯಿಂದ ವಾಪಸ್ ಬರುವುದರ ಒಳಗೆ ಒಂದು ರೌಂಡ್ ನಿದ್ದೆ ಮಾಡಿ ವಿಶ್ರಮಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ.

ನಿದ್ದೆ ಮಾಡುವುದರಿಂದ ಶೇಕಡಾ 33% ಹೃಧಯಾಘಾತ ವಾಗುವ ಪ್ರಮಾಣ ಕಡಿಮೆ ಆಗುತ್ತದೆ.60 ವರ್ಷ ಮೇಲ್ಪಟ್ಟ ಜನರು ಮಧಾಹ್ನ ನಿದ್ದೆ ಮಾಡುವುದರಿಂದ ಬೇರೆಯವರಿಗಿಂತ ತುಂಬಾ ಆಕ್ಟಿವ್ ಆಗಿರುತ್ತಾರೆ.ಹಾಗೂ ಅವರ ಬುದ್ಧಿವಂತಿಕೆಯ ಪ್ರಮಾಣ ಹೆಚ್ಚಳವಾಗುತ್ತದೆ ಎನ್ನಲಾಗುತ್ತೆ ಎಂಬುದು ವಾದ.

ಹಾಗಾದರೆ ಇನ್ನೇಕ ತಡ ಸಮಯಕ್ಕೆ ಸರಿಯಾಗಿ ಊಟ ಮಾಡಿ ರಾತ್ರಿ ಹೊತ್ತು ಬೇಗೆನೆ ಮಲಗಿಕೊಳ್ಳಿ. ಆರೋಗ್ಯ ತನ್ನಿಂದ ತಾನೇ ಸರಿಯಾಗುತ್ತದೆ ಆಕ್ಟಿವ್ ಆಗಿ ಕಾರ್ಯನಿರ್ವಹಿಸುತ್ತೀರ.