ನಿದ್ದೆಯಲ್ಲಿ ಗೊರಕೆ ಸಾಮಾನ್ಯ. ಆದ್ರೆ ಪಕ್ಕದಲ್ಲಿ ಮಲಗಿರುವವರಿಗೆ ಈ ಗೊರಕೆ ಕಿರಿಕಿರಿಯನ್ನುಂಟು ಮಾಡುತ್ತೆ.

ಗೊರಕೆ ಜಾಸ್ತಿಯಾದ್ರೆ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಯಾಕೆಂದ್ರೆ ಹೃದಯ ಸಂಬಂಧಿ ಕಾಯಿಲೆಗೆ ಗೊರಕೆ ಕಾರಣವಾಗಬಹುದು. ಮನೆಯಲ್ಲಿಯೇ ಕೆಲವೊಂದು ಮದ್ದು ಮಾಡಿಕೊಂಡು ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

 

ಗಂಟಲಿನ ಊತವನ್ನು ಕಡಿಮೆ ಮಾಡುವ ಗುಣ ಪುದೀನಾದಲ್ಲಿದೆ. ಮಲಗುವ ಮೊದಲು ಪುದೀನಾ ಮೌತ್ ವಾಶ್ ನಿಂದ ಬಾಯಿ ಮುಕ್ಕಳಿಸಿಕೊಂಡು ಮಲಗಿ. ಅನೇಕ ದಿನಗಳ ಕಾಲ ಹೀಗೆ ಮಾಡಿದ್ರೆ ಪರಿಣಾಮ ನಿಮಗೆ ಕಾಣುತ್ತೆ.

 

ಅರಿಶಿನದಲ್ಲಿ ಎಂಟಿ ಸೆಪ್ಟಿಕ್ ಹಾಗೂ ಎಂಟಿ ಬಯೋಟಿಕ್ ಗುಣಗಳಿರುತ್ತವೆ. ಇದರ ಬಳಕೆಯಿಂದ ಉಸಿರಾಟ ಸುಲಭವಾಗುತ್ತದೆ. ಪ್ರತಿದಿನ ರಾತ್ರಿ ಹಾಲಿಗೆ ಅರಿಶಿನ ಹಾಕಿ ಕುಡಿಯುವುದು ಒಳ್ಳೆಯದು.

 

ಸೈನಸ್ ಸಮಸ್ಯೆ ಇರುವವರಿಗೆ ಬೆಳ್ಳುಳ್ಳಿ ಉತ್ತಮ. ಇದು ಉಸಿರಾಟ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಬೆಳ್ಳುಳ್ಳಿ ಉತ್ತಮ ಹಾಗೂ ಚೆನ್ನಾಗಿ ನಿದ್ದೆ ಬರಲು ಸಹಕಾರಿ.

ಆಲಿವ್ ಆಯಿಲ್ ಕೂಡ ಮನೆ ಮದ್ದುಗಳಲ್ಲಿ ಒಂದು. ಇದರ ಬಳಕೆಯಿಂದ ಉಸಿರಾಟ ಸರಾಗವಾಗುತ್ತದೆ.

 

ಏಲಕ್ಕಿ ಕೂಡ ಒಳ್ಳೆಯ ಔಷಧಿ. ರಾತ್ರಿ ಬೆಚ್ಚಗಿನ ನೀರಿಗೆ ಏಲಕ್ಕಿ ಪುಡಿ ಬೆರೆಸಿ, ಅದನ್ನು ಕುಡಿಯುವುದರಿಂದ ಉಸಿರಾಟ ಸಮಸ್ಯೆ ಕಡಿಮೆಯಾಗುತ್ತದೆ.