ಹಾಲಿನ ಕ್ಯಾಲ್ಸಿಯಂ ಅಂಶವಿರುವುದರಿಂದ ಅದರ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ಆದರೆ, ಹಾಲು ಎಲ್ಲರ ದೇಹ ಗುಣಕ್ಕೂ ಆಗಿಬರಲ್ಲ. ಕೆಲವರಿಗೆ ಹಾಲು ಸೇವಿಸಿದರೆ ನಂತರ ವಾಕರಿಕೆ ಬಂದ ಹಾಗೆ ಆಗುವುದು, ಮೈ ಮೇಲೆ ಅಲರ್ಜಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಅಂತವರು ಹಾಲು ಸೇವಿಸದೆ ಇರುವುದು ಒಳಿತು.

ಇನ್ನು ಕಫ, ಆಸಿಡಿಟಿ ಸಮಸ್ಯೆ ಇರುವವರು ಹಾಲಿನಿಂದ ದೂರವಿರಬೇಕು. ಗಂಟಲಿನ ತೊಂದರೆ, ಉಸಿರಾಟದ ತೊಂದರೆ ಇರುವವರು ಹಾಲು ತ್ಯಜಿಸುವುದು ಉತ್ತಮ ಎಂದು ಸಂಶೋಧನೆಯೊಂದು ಹೇಳಿದೆ.