ಬಹಳಷ್ಟು ಮಂದಿ ಆಲೂಗಡ್ಡೆ ವಾಯು ಅಂತ ಅಡುಗೆಯಲ್ಲಿ ಬಳಸುವುದಿಲ್ಲ.

ಉಪಯೋಗಗಳು :– ಅಸಿಡಿಟಿಯನ್ನು ಕಮ್ಮಿ ಮಾಡುತ್ತದೆ.
ಅಜೀರ್ಣ ಹಾಗೂ ಇತರ ಅಸಿಡಿಟಿ ತೊಂದರೆಗಳನ್ನು ಆಲೂಗಡ್ಡೆ ತಕ್ಷಣ ಕಡಿಮೆ ಮಾಡುತ್ತದೆ. ಬೇಯಿಸಿ ನುಣ್ಣಗೆ ಮೆದ್ದುಕೊಂಡ ಆಲೂಗಡ್ಡೆ ಅಜೀರ್ಣಕ್ಕೆ ಒಳ್ಳೆಯ ಮದ್ದು.
ಕೊಬ್ಬನ್ನು ಹಿಡಿತದಲ್ಲಿ ಇಡುತ್ತದೆ.

ದೇಹದ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಅನ್ನು ಆಲೂಗಡ್ಡೆಯೂ ಹಿಡಿತದಲ್ಲಿ ಇಡುತ್ತದೆ. ಇದರಲ್ಲಿ ಇರುವ ಜೀರ್ಣವಾಗುವ ಫೈಬರ್ ಹಾಗೂ ವಿಟಮಿನ್ ಸಿ ಈ ಕೆಲಸ ಮಾಡುತ್ತದೆ.
ನಾರಿನಂಶ ಬಹಳ ಹೆಚ್ಚು-
ಆಲೂಗಡ್ಡೆಯ ನಾರಿನಂಶ ಮಲದ್ಧತೆಯನ್ನು ಕಡಿಮೆ ಮಾಡುತ್ತದೆ. ಆದರ್ಲ್ಲೂ ಗರ್ಭಿಣಿಯರಲ್ಲಿ ಮಲಬದ್ದತೆ ತೊಂದರೆಗಳು ಬಹಳ ಸಾಮಾನ್ಯ. ಇದರ ನಿವಾರಣೆಗೆ ಆಲೂಗಡ್ಡೆ ಉಪಯೋಗಿ.
ವಿಟಮಿನ್ ಬಿ ಹಾಗೂ ಸಿ ಇದೆ.

ಆಲೂಗಡ್ಡೆಯಲ್ಲಿ ಇರುವ ವಿಟಮಿನ್ ಗಳು ಗಾಯಗಳನ್ನು ವಾಸಿಮಾಡುವ ಅಂಶ ಹೊಂದಿರುತ್ತವೆ. ನಮ್ಮ ದೇಹದ ರಕ್ಷಣಕವಚವನ್ನು ಗಟ್ಟಿ ಮಾಡುತ್ತವೆ. ಇದೆ ಅಲ್ಲದೆ ನಾವು ಸೇವಿಸುವ ಇತರ ಆಹಾರಗಳಲ್ಲಿನ ಕಬ್ಬಿಣದ ಅಂಶವನ್ನು ಹೀರಿಕೊಳ್ಳುವಲ್ಲಿ ಸಹಾಯಮಾಡುತ್ತದೆ.