ಆಹಾರದಲ್ಲಿ ಬಟಾಣಿಯನ್ನು ನಿಯಮಿತವಾಗಿ ಬಳಸುವುದರಿಂದ ಮೂಳೆಗಳು ದೃಢವಾಗುತ್ತದೆ.

ಕೀಲುನೋವು ಉಂಟಾದಾಗ ಆ ಜಾಗಕ್ಕೆ ನೀಲಗಿರಿ ಎಣ್ಣೆಯನ್ನು ಹಚ್ಚಿಕೊಂಡು ತಿಕ್ಕುವುದರಿಂದ ನೋವು ಶಮನವಾಗುತ್ತದೆ.

ಮೊಸರಲ್ಲಿ ನೆನಸಿದ ಐದಾರು ಮೆಂತ್ಯ ಕಾಳುಗಳನ್ನು ಬೆಳಗ್ಗೆ ಖಾಲಿ ಹೋಟೆಯಲ್ಲಿ ಸೇವಿಸುವುದರಿಂದ ದೇಹದಲ್ಲಿ ಉಂಟಾದ ಅಧಿಕ ಉಷ್ಣತೆ ಕಡಿಮೆಯಾಗುತ್ತದೆ.

ಚಳಿಗಾಲದಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದರಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಬಹುದು ಅಲ್ಲದೆ ರೋಗ ನಿರೋಧಕಶಕ್ತಿಯೂ ಹೆಚ್ಚುತ್ತದೆ.

ಸಂಗ್ರಹ