ಆಹಾರದಲ್ಲಿ ರಾಗಿಯ ನಿಯಮಿತ ಬಳಕೆಯಿಂದ ಮೂಳೆಗಳು ಸಧೃಢಗೊಳ್ಳುತ್ತವೆ.

ಅಡುಗೆಯಲ್ಲಿ ನಿಯಮಿತವಾಗಿ ಕಾಳುಮೆಣಸಿನ ಪುಡಿಯನ್ನು ಬಳಸುವುದರಿಂದ ಹೊಟ್ಟೆ ಉಬ್ಬರದ ಬಾಧೆ ನಿವಾರಣೆಯಾಗುತ್ತದೆ.

ತಲೆಯಲ್ಲಿ ತುರಿಕೆ ಕಂಡು ಬಂದಾಗ ಬೇವಿನ ಎಲೆಯನ್ನು ಅರೆದು ಹಚ್ಚಿಕೊಂಡು ೧೦ ನಿಮಿಷದ ನಂತರ ತಲೆಯನ್ನು ತೊಳೆದುಕೊಳ್ಳಬೇಕು.

ಸಪೋಟ ಹಣ್ಣಿನ ನಿಯಮಿತ ಸೇವನೆಯಿಂದ ಮಲಬದ್ದತೆಯ ಸಮಸ್ಯೆಗಳನ್ನು ನಿವಾರಿಸಬಹುದು.

ಹಸಿ ಕ್ಯಾರೆಟ್‌ನ ನಿಯಮಿತ ಸೇವನೆಯಿಂದ ಮಂಡಿನೋವನ್ನು ತಡೆಯಬಹುದು.