ಕೀಲುನೋವು ಉಂಟಾದಾಗ ಆ ಜಾಗಕ್ಕೆ ನೀಲಗಿರಿ ಎಣ್ಣೆಯನ್ನು ಹಚ್ಚಿಕೊಂಡು ತಿಕ್ಕುವುದರಿಂದ ನೋವು ಶಮನವಾಗುತ್ತದೆ.

ಆಹಾರದಲ್ಲಿ ಬಟಾಣಿಯನ್ನು ನಿಯಮಿತವಾಗಿ ಬಳಸುವುದರಿಂದ ಮೂಳೆಗಳು ದೃಢವಾಗುತ್ತದೆ.

ದಾಲ್ಚಿನಿ ಚಕ್ಕೆಯಪುಡಿಯನ್ನು ಜೇನುತುಪ್ಪದಲ್ಲಿ ಕಲಸಿಕೊಂಡು ಪ್ರತಿದಿನ ಎರಡು ಸಲ ಸೇವಿಸುತ್ತಿದ್ದರೆ ಸಂಧಿವಾತವನ್ನು ಹತೋಟಿಯಲ್ಲಿಡಬಹುದು.

ಮೊಸರಲ್ಲಿ ನೆನಸಿದ ಐದಾರು ಮೆಂತ್ಯ ಕಾಳುಗಳನ್ನು ಬೆಳಗ್ಗೆ ಖಾಲಿ ಹೋಟೆಯಲ್ಲಿ ಸೇವಿಸುವುದರಿಂದ ದೇಹದಲ್ಲಿ ಉಂಟಾದ ಅಧಿಕ ಉಷ್ಣತೆ ಕಡಿಮೆಯಾಗುತ್ತದೆ.