ಚಳ್ಳಿಗಾಲದಲ್ಲಿ ಬರುವ ಅವರೆ ಕಾಳಿಗೆ ಮನಸೋಲದವರೇ ಇಲ್ಲ. ಬಾಯಲ್ಲಿ ನೀರು ಬರಿಸುವ ಅವರೆ ಕಾಳು ಉಪ್ಪಿಟ್ಟು.! ಅವರೆ ಕಾಳಿನ ಸಾರು ಮುದ್ದೆ, ಬೋಟಿ ಪ್ರೈಗೆ ಅವರೆ ಕಾಳು ಮಿಕ್ಸ್ ಮಾಡಿದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತೇವೆ ಅಲ್ಲವೆ.!

ಕೆಲವರು ಅವರೆ ಕಾಯಿ ತಿಂದ್ರೆ ವಾಯು ಅಂತ ಹೇಳುವವರು ಇದ್ದಾರೆ. ಆದ್ರೆ ಇಂದು ಅವರೆ ಕಾಯಿ ನೀರಾವರಿಯಲ್ಲಿ ಎಲ್ಲಕಾಲದಲ್ಲೂ ಬೆಳೆಯುತ್ತಾರೆ. ಆದರೆ ಆ ಅವರೆ ಕಾಯಿ ಸೊಗಡು ಇರುವುದಿಲ್ಲ. ಅದೇ ಚಳ್ಳಿಗಾಲದಲ್ಲಿ ಬರುವ ಅವರೆ ಕಾಯಿ ಬಿಡಿಸಿದರೆ ಕೈ ಎಲ್ಲಾ ಜಿಡ್ಡುಇರುತ್ತದೆ ವಾಸನೆ ಘಂ ಅಂತ ಬರುತ್ತೆ ಅಲ್ವೆ ಹಾಗಾದ್ರೆ ಈ ಅವರೆ ಕಾಯಿಯಲ್ಲಿ ಏನೆಲ್ಲಾ ವಿಟಮಿನ್ ಗಳು ಅಡಕವಾಗಿವೆ ಎಂಬುದರ ಬಗ್ಗೆ ಒಮ್ಮೆ ಕಣ್ಣಾಯಿಸಿ.

ಅವರೆಕಾಳಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಫೈಬರ್​ ಮತ್ತು ವಿಟಮಿನ್​ ಅಂಶ ಆರೋಗ್ಯಕ್ಕೆ ಬಹಳ ಉಪಕಾರಿಯಾಗಿದೆ. ಅವರೆಕಾಳು ಮಕ್ಕಳ ಬೆಳವಣಿಗೆಯಲ್ಲಿ ಸಹಕಾರಿಯಾಗಿದೆ. ಅವರೆಕಾಳು ಹಸಿವನ್ನು ನಿಯಂತ್ರಣದಲ್ಲಿಡುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಜೊತೆಗೆ ಮಾಂಸಾಹಾರ ಸೇವನೆಯಿಂದ ಸಿಗುವ ಪ್ರೊಟೀನ್​ ಪ್ರಮಾಣ ಕೂಡ ಅವರೆಕಾಳಿನಿಂದ ಸಿಗುತ್ತದೆ.ಅವರೆಕಾಳಿನಲ್ಲಿ ಮಿನರ್ಲ್ಸ್​ಗಳಾದ ಮ್ಯಾಗ್ನೇಶಿಯಂ, ಪೊಟ್ಯಾಶಿಯಂ ಹಾಗೆ ಕ್ಯಾಲ್ಶಿಯಂ ಅಂಶಗಳಿವೆ. ಇವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

ಹಾಗಾದ್ರೆ ಈ ಚಳ್ಳಿಗಾಲದಲ್ಲಿ ಬರುವ ಜವಾರಿ ಅವರೆ ಕಾಯಿ ತಂದು ವಿಧವಿಧವಾದ ಭಕ್ಷವನ್ನು ತಯಾರಿಸಿಕೊಳ್ಳಿ.