ಬಿಸಿಲಿನ ತಾಪಕ್ಕೆ ಜನರು ಏನೆಲ್ಲ ಸರ್ಕಸ್ ಮಾಡುತ್ತಾರೆ.  ಆದರೆ ದೇಹವನ್ನು ತಂಪಾಗಿಡಲು ಜ್ಯೂಸ್, ಎಳನೀರು ಹೀಗೆ ನಾನಾ ರೀತಿಯ ಪೇಯಗಳಿಗೆ ಮೊರೆ ಹೋಗುವುದು ಸಾಮಾನ್ಯ ಅಲ್ವ. ಆದರೆ ಇವು ಸ್ವಲ್ಪ ದುಬಾರಿಯಾದ ಹಿನ್ನೆಲೆಯಲ್ಲಿ ಬಡವರ ಕೈಗೆ ಎಟಕುವವಲ್ಲಾ ಹಾಗಾಗಿ  ಮನೆಯಲ್ಲಿಯೇ ರಾಗಿ ಅಂಬಲಿ ತಯಾರಿಸಿ ಕುಡಿದರೆ, ಕಡಿಮೆ ಖರ್ಚಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಜೊತೆಗೆ ದೇಹವನ್ನು ತಂಪಾಗಿಯೂ ಇಡಬಹುದು. ರಾಗಿ ತಿಂದವನು ನಿರೋಗಿ  ಎಂಬ ಗಾದೆ ಮಾತಿನಂತೆ ಬೇಸಿಗೆಯಲ್ಲಿ ರಾಗಿ ಅಂಬಲಿ ಮಾಡಿ ಕುಡಿಯುವುದರಿಂದ ದೇಹದ ತಾಪಮಾನವನ್ನು ಕಡಿಮೆ ಮಾಡಬಹುದು.!

ಹಾಗಾದರೆ ಇನ್ನೇಕ ತಡ ನಿತ್ಯ ರಾಗಿ ಅಂಬಲಿ ಕುಡುದು ಬಿಸಿಲಿನ ತಾಪದಿಂದ ದೇಹವನ್ನು ತಂಪಾಗಿಡಬಹುದು.