ಚಿತ್ರುರ್ಗ: ಈ ಸುದ್ದಿ ಯಾರನ್ನು ಮೆಚ್ಚಿಸಲಿಕ್ಕೆ ಆಗಲಿ ಮತ್ತೊಬ್ಬರನ್ನು ತೆಗಳುವುದಕ್ಕಾಗಲಿ ಅಲ್ಲ.

ಏಕೆಂದರೆ ಚಿತ್ರದುರ್ಗ ಜಿಲ್ಲೆ ಹಲವಾರು ಕಾರಣಕ್ಕೆ ರಾಜ್ಯದಲ್ಲಿ ಹೆಸರು ಮಾಡಿದೆ. ಅದೊಂದು ಸದಾ ಬರಗಾಲದ ಜಿಲ್ಲೆ. ಹುಲ್ಲುಗಾವಲು ಪ್ರದೇಶ. ಬುಡಕಟ್ಟು ಸಮಾಜ. ಹೀಗೆ ಅಂತ ಹೆಸರುಮಾಡಿದ ಈ ಜಿಲ್ಲೆ. ಹಲವು ತಳ ಸಮುದಾಯಗಳ ಸ್ವಾಮೀಜಿಗಳನ್ನು ಕೊಟ್ಟ ಜಿಲ್ಲೆ ಅಂತ ಕರೆದರೂ ತಪ್ಪಲ್ಲಾ.

ಚಿತ್ರದುರ್ಗ ಮುರುಘಾ ಮಠದ ಮುರುಘಾ ಶರಣರು ಪ್ರಗತಿ ಪರ ಸ್ವಾಮೀಜಿಗಳೆಂದೇ  ರಾಜ್ಯದಲ್ಲಿ  ಹೆಸರು ಮಾಡಿದ್ದಾರೆ. ತಳ ಸಮುದಾಯದವರಿಗೆ ಸ್ವಾಮೀಜಿಗಳನ್ನು ಕೊಟ್ಟವರಲ್ಲಿ ಮೊದಲಿಗರು.

ಇಂತಹ ಸ್ವಾಮೀಜಿಗೆ ಬೆದರಿಕೆ ಕರೆ ಬರುತ್ತದೆ ಅಂದ್ರೆ ಏನರ್ಥ. ಈ ಹಿಂದೆ ಮುರುಘಾ ಮಠದಿಂದ ನೀಡುವ ಬಸವಶ್ರೀ ಪ್ರಶಸ್ತಿಯನ್ನು ಕ್ರಾಂತಿ ಕಾರಿ ಗದ್ದರ್ ಅವರಿಗೆ ನೀಡಿದಾಗ  ಬೆದರಿಕೆ ಕರೆ ಬಂದಿತ್ತು ಅಂತ ಶರಣರು ಭಾಷಣದಲ್ಲಿ ಹೇಳಿದ್ದರು.

ಆಗ ಯಾಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದರು, ಅದರ ಕಥೆ ಏನಾಯಿತು.? ಆದ್ರೆ ಮೊನ್ನೆ ಅಂತದ್ದೊಂದು ಕರೆ ಮುರುಘಾ ಶರಣರಿಗೆ ಬಂದಿದೆ. ಆಗ ನಗರದಲ್ಲಿ ರಾಜ್ಯ ಎಲ್ಲಾ ಮಠಧೀಶರು ಬಂದು ಶರಣರಿಗೆ ಬೇದರಿಕೆ ಹಾಕಿದವರನ್ನು ಬಂಧಿಸಿ ಅಂತ ಹೇಳಿದರು.

ಸಿರಿಗರೆ ಡಾ. ಶ್ರೀಗಳು ಮಾತ್ರ ಮೌನವಾಗಿ ರಾಜ್ಯ ಬರಗಾಲದಿಂದ ತತ್ತರಿಸಿದೆ ಹಾಗಾಗಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಬೇಡ ಅಂತ ಹೇಳಿದರು.  ಜನ, ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಟೊಂಕಟ್ಟಿ ನಿಂತರು. ಅದಕ್ಕೆ ಪೂರಕ ಎಂಬಂತೆ ಕೆಲ ಕಡೆ ನೀರು ಬಂದಿದೆ

ಹಾಗೇ ಬೆಳೆ ಪರಿಹಾರದ ಹಣವನ್ನು, ಬ್ಯಾಂಕುಗಳು ರೈತರು ಸಾಲ ಮಾಡಿದ ಖಾತೆಗೆ ಜಮಮಾಡಿ ಕೊಳ್ಳಬಾರದೆಂದು   ಸರಕಾರಕ್ಕೆ ಒತ್ತಾಯಿಸಿದರು.

ಮುರುಘಾ ಶರಣರು ಪೀಠಕ್ಕೆ ಬಂದು 25 ವರ್ಷಗಳಾದಾಗ ಅವರು ಜಿಲ್ಲೆಯ ಯಾವುದಾರೊಂದು ಹಳ್ಳಿಯನ್ನು ದತ್ತು ಪಡೆದು ಎಲ್ಲಾ ರೀತಿಯ ಸವಲತ್ತು ನೀಡುವಲ್ಲಿ ಮುಂದಾಗಿದ್ದರೆ.?

ಈ ಜಿಲ್ಲೆಗೆ ಎರಡು ದೊಡ್ಡಮಠಗಳು ಇವೆ. ಈ ಎರಡು ಮಠಗಳು ಒಂದಾಗಿ ನಿಂತರೆ.? ಜಿಲ್ಲೆಯ ಬರಡು ಜಿಲ್ಲೆಯನ್ನು ನಂದನವನ್ನಾಗಿ ಮಾಡಬಹುದು ಎಂಬುದು ಎರಡು ಮಠದ ಭಕ್ತರು ಅಂಬೋಣ.

-ಸಂ