ಇದು ನನ್ನೊಬ್ಬನ ಪ್ರಶ್ನೆ ಅಲ್ಲ. ಕಳೆದ ನಾಲ್ಕು ದಿನಗಳಿಂದ ಖಾಸಗಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆಗೆ ರೋಗಿಗಳಿಗೆ ಚಿಕಿತ್ಸೆ ಸಿಗದೇ ರಾಜ್ಯದಲ್ಲಿ ೨೨ ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಹಲೋ ಡಾಕ್ಟರ್ ನಿಮ್ಮ ಮನೆಯವರಿಗೆ ಇಂತಹ ನೋವು ಬಂದಿದ್ದರೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ರಾ ಎಂಬ ಪ್ರಶ್ನೆ. ಮತ್ತೊಂದು ಕಡೆ ಸರಕಾರ ಉಡಾಫೆ ಮಾತು. ಆದ್ರೆ ಇಂದಿಗೂ ಸಾಮಾನ್ಯ ಜನರಿಗೆ ಖಾಸಗಿ ವೈದ್ಯರು ಏಕೆ ಶಾಪ್‌ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ ಅಂತ ಗೊತ್ತಿಲ್ಲ. ಆದ್ರೆ ನೋವು ಮಾತ್ರ ರೋಗಿಗಳಿಗೆ ಅವರ ಕುಟುಂಬದವರಿಗೆ.

ಸರಕಾರಿ ಆಸ್ಪತ್ರೆಗಳು ಬರು ಬರುತ್ತಾ ಬಿಳಿ ಆನೆಗಳಂತಾಗಿ. ಜನರು ಸರಕಾರಿ ಆಸ್ಪತ್ರೆ ಅಂದ್ರೆ ಹೇದರಿಕೆ ಉಂಟಾಗಿದೆ. ಇದನ್ನು ಕಂಡ ಖಾಸಗಿ ನರ್ಸಿಂಗ್ ಹೋಂಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ
ಹೇಗೆ ಅಂದ್ರೆ ಸರಕಾರಿ ಶಾಲೆ ಮುಚ್ಚುವ ಸ್ಥಿತಿಗೆ ಬಂದು ಖಾಸಗಿ ಶಾಲೆಗಳು ಹೇಗೆ ಹುಟ್ಟಿಕೊಂಡವು ಎಂಬುದು ಗೊತ್ತಿರುವಂತದ್ದು.

ಅದು ಯಾವುದೇ ಪಕ್ಷಕ್ಕ ಅಧಿಕಾರಕ್ಕೆ ಬರಲಿ ಮೊದಲು ಜನರಿಗೆ ಬೇಕಿರುವುದು ಉತ್ತಮ ಆಹಾರ, ಆರೋಗ್ಯ, ಶಿಕ್ಷಣ ನೀಡುವುದು ಸರಕಾರದ ಕೆಲಸ. ಆದ್ರೆ ಅದ್ಯಾವದನ್ನ ಸರಕಾರಗಳು ಜನತೆಗೆ ನೀಡುವಲ್ಲಿ ಮುಂದಾಗಿಲ್ಲ.
ವೈದ್ಯೋ ನಾರಾಯಣ ಹರಿ ಎಂದು ಕರೆಸಿಕೊಳ್ಳುವ ಡಾಕ್ಟರ್ ಅವರೇ ಪ್ರತಿಭಟನೆ ನಡೆಸಲು ಬೇಕಾದಷ್ಟು ದಾರಿಗಳಿವೆ. ನಿಮ್ಮ ಹೋರಾಟದ ಬಗ್ಗೆ ನನ್ನ ಪ್ರಶ್ನೆ ಅಲ್ಲ. ಮೊದಲು ಜನರಿಗೆ ತಿಳುವಳಿಕೆ ನೀಡಬೇಕು. ಯಾತಕ್ಕಾ ಹೋರಾಟ ಮಾಡುತ್ತಿದ್ದೇವೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಅದು ಬಿಟ್ಟು ಇದಕ್ಕಿದ್ದಂತೆ ಅಂಗಡಿ ಬಂದ್ ಮಾಡಿ ಪ್ರತಿಭಟನೆ ಮಾಡಿದ್ರೆ ಸರಿನಾ.

ನೀವು ಹೇಳುತ್ತೀರ ನಾವು ಸರಕಾರಕ್ಕೆ ಬಹಳ ಸಲ ಮನವಿ ಮಾಡಿದ್ದೇವೆ ಸರಕಾರ ಮನ್ನಣೆ ನೀಡಿಲ್ಲ ಹಾಗಾಗಿ ನಾವು ಪ್ರತಿಭಟನೆಗೆ ಮುಂದಾಗಿದ್ದೇವೆ ಅಂತ ಹೇಳುತ್ತೀರ. ಸರಿ ಇದು ನಿಮ್ಮ ಕಾಲ. ಜನರಿಗೂ ಒಂದು ಕಾಲ ಬರುತ್ತೆ.
ಆದ್ರೆ ನಿಮ್ಮ ಪ್ರತಿಭಟನೆಗೆ ನನ್ನ ಧಿಕ್ಕಾರ…!
-ಸಂ