ಬಳ್ಳಾರಿ: ಯಾವಾಗ ಡಿಕೆಶಿ ಮನೆ ಮೇಲೆ ಐಟಿ ದಾಳಿ ಆಯಿತು ಅಂದಿನಿಂದ  ದೇವಸ್ಥಾನಗಳಿಗೆ ಹೆಚ್ಚು ಭೇಟಿ ನೀಡುತ್ತಿರುವುದು ಹೊಸದೇನಲ್ಲಾ. ಆದ್ರೆ ಇಂದು ಸಂಡೂರಿನ ಕಾಡತಾತಯ್ಯ ಭವಿಷ್ಯ ಕೇಳಿ ಫುಲ್ ಖುಷಿ ಆಗಿದ್ದಾರೆ.

ಖುಷಿ ಆಗಿರುವುದಕ್ಕೆ ಕಾರಣ ಏನಪ್ಪ ಅಂದ್ರೆ ಬಳ್ಳಾರಿಯ ಸಂಡೂರಿನ ಕಾಡಿನ ಮಧ್ಯದಲ್ಲಿರುವ ಅನ್ನಪೂಣೇಶ್ವರಿ ಮಠಕ್ಕೆ ಭೇಟಿ ನೀಡಿದಾಗ ಅಲ್ಲಿ   ಭವಿಷ್ಯ ಹೇಳಿದ್ದೇನೆಂದರೆ  ಈ ಬಾರಿ ಬಳ್ಳಾರಿ ಉಪಚುನಾವಣೆಯಲ್ಲಿ ಗೆಲುವು ನಿಮ್ಮದೇ ಎಂದು ಹೇಳಿದ್ದಾರೆ ಎಂಬ ಸುದ್ದಿ ಬಳ್ಳಾರಿ ಜಿಲ್ಲೆಯ ವೈರಲ್  ಆಗಿದೆ.