ಸ್ನೇಹಿತರೆ,

ಪ್ರತಿಮೆಗಳನ್ನು ಒಡೆದು ಹಾಕುವ ಸಂಸ್ಕೃತಿ ಏನನ್ನ ಸೂಚಿಸುತ್ತದೆ ಎಂಬುದು ನನ್ನ ಮನಸ್ಸಿನಲ್ಲಿ ತಳಮಳ ಶುರುವಾಗಿದೆ.

ರಾಜಕೀಯ ಗದ್ದುಗೆಗಾಗಿ ಯಾವ ಯಾವ ತಂತ್ರಗಳನ್ನು ಬಳಸಲಾಗುತ್ತದೆ. ಜನರ ಮನಸ್ಸಿನ ಮೇಲೆ ಯಾವ ಪರಿಣಾಬೀರುತ್ತದೆ ಎಂಬುದುರ ಪರಿವೆ ಇಲ್ಲದೆ ಪ್ರತಿಮೆಗಳನ್ನು ಧ್ವಂಸ ಮಾಡಿದರೆ, ಅವರ ಸಿದ್ದಾಂತಗಳನ್ನು ಧ್ವಂಸಮಾಡಿದಂತ್ತಲ್ಲ.

ಮೊದಲು ಪ್ರತಿಮೆಗಳನ್ನು ನಿಲ್ಲಿಸುವುದೇ ಸರಿ ಅಲ್ಲ. ಕೆಲವೊಂದು ಪ್ರತಿಮೆಗಳು ಸರಕಾರಗಳೇ ಜನರ ದುಡ್ಡಿನಿಂದ ಪ್ರತಿಷ್ಠಾಪಿಸಲಾಗುತ್ತದೆ.

ಒಂದು ಸರಕಾರ ಬಂದಾಗ ಒಂದೊಂದು ಪ್ರತಿಮೆಗಳನ್ನು ನಿಲ್ಲಿಸಲಾಗುತ್ತದೆ. ಮತ್ತೆ ಬೇರೆ ಪಕ್ಷ ಅಧಿಕಾರಕ್ಕೆ ಬಂದಾಗ ಆ ಪ್ರತಿಮೆಗಳನ್ನು ಧ್ವಂಸಮಾಡಲಾಗುತ್ತದೆ.

ಉತ್ತರ ಪ್ರದೇಶದಲ್ಲಿ ಒಂದು ಸರಕಾರ ಅಧಿಕಾರದಲ್ಲಿದ್ದಾಗ ಆನೆಗಳನ್ನು ನಿಲ್ಲಿಸಲಾಯಿತು. ಮತ್ತೆ ಬೇರೆ ಪಕ್ಷ ಅಧಿಕಾರಕ್ಕೆ ಬಂದಾಗ ಸರಕಾರಿ ಕಚೇರಿಗಳನ್ನು ಬಸ್ ಗಳಿಗೆ ಕೇಸರಿ ಬಣ್ಣವನ್ನು ಬಳಸಿಲಾಯಿತು. ಇದಕ್ಕೆಲ್ಲಾ ಯಾರ ಹಣವನ್ನು ಖರ್ಚುಮಾಡಲಾಯಿತು.

ಈಗ ತ್ರಿಪುರದಲ್ಲಿ ಲೇನಿನ್ ಪ್ರತಿಮೆಯನ್ನು ಕೆಡವಲಾಯಿತು. ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆಗೆ ಮುಕ್ಕು ಮಾಡಲಾಯಿತು.

ಆಯಾ ಪ್ರತಿಮೆಗಳ ಬಗ್ಗೆ ಅವರ ಸಿದ್ದಾಂತಗಳನ್ನು ಒಪ್ಪಿಕೊಂಡ ಜನರ ಮನಸ್ಸಿಗೆ ಘಾಸಿ ಆಯಿತು.

ಪ್ರತಿಮೆಗಳನ್ನು ಧ್ವಂಸಮಾಡುವ ಮೂಲಕ ಏನನ್ನು ಸಾಧಿಸಲಾಗುತ್ತದೆ. ಯಾವ ರಾಜಕೀಯದ ಸೇಡು ನಾವು ಯಾವ ಕಡೆ ಸಾಗುತ್ತಿದ್ದೇವೆ. ಯಾರನ್ನು ಮೆಚ್ಚಿಸಲು ಈ ಕೆಲಸಕ್ಕೆ ಮುಂದಾಗುತಿದ್ದಾರೆ ಎಂಬ ಆತಂಕವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ,

ಅರಸಿಗೆ ಆಚಾರ ಅನುಸರಣೆಯಾಯಿತ್ತೆಂದು,
ಸದಾಚಾರಿಗಳೆಲ್ಲಾ ಬನ್ನಿರಿಂದು,
ಕೂಲಿಗೆ ಹಾವ ಕಚ್ಚಿಸಿಕೊಂಡು ಸಾವತೆರೆದಂತೆ
ದ್ರವ್ಯದ ಮುಖದಿಂದ ಸರ್ವರ ಕೂಡಿ ತಪ್ಪನೊಪ್ಪಗೊಳ್ಳಿಯೆಂದು
ದಿಪ್ಪನೆ ಬೀಳುತ್ತ ತನ್ನ ವ್ರತದ ದರ್ಪಂಗೆಟ್ಟು
ಕೀಲಿಗೆ ದೇವಾಲಯವ ನೋಡುವವನಂತೆ,
ಕಂಬಳಕ್ಕೆ ಅಮಂಗಲವ ತಿಂಬವನಂತೆ, ಇವನ ದಂದುಗವ ನೋಡಾ ?
ಇವನ ಸಂಗವ ಮಾಡಿದವನು ಆಚಾರಕ್ಕೆ ಅಂದೆ ಹೊರಗು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.

-ಅಕ್ಕಮ್ಮ

-ಸಂ