ಬೆಂಗಳೂರು: ಮತದಾರನ್ನು ಸಳೆಯಲು ಒಂದೊಂದು ಪಕ್ಷದವರು ಒಂದೊಂದು ರೀತಿಯ ತಂತ್ರಗಳನ್ನು ಎಣೆಯುತ್ತಿದ್ದಾರೆ,ಜೆಡಿಎಸ್. ಕುಮಾರಣ್ಣನ ಗ್ರಾಮ ವಾಸ್ತವ್ಯ, ಮನೆ ಮನೆಗೆ ಕುಮಾರ ಪರ್ವ. ಕಾಂಗ್ರೆಸ್ ಸಾಧನಾ ಸಮಾವೇ. ಬಿಜೆಪಿಯವರ ದಲಿತ ಮನೆಯಲ್ಲಿ ಊಟ, ಪರಿವರ್ತನಾ ಯಾತ್ರೆ, ಈಗ ಸ್ಲಂ ವಾಸ್ತವ್ಯ. ಹೇಗಿದೆ ನೋಡಿ ಚುನಾವಣೆ ಗಿಮಿಕ್. ಈ ಎಲ್ಲಾ ಗಿಮಿಕ್ ಮಾಡುವುದರ ಬದಲು ಅಧಿಕಾರ ಸಿಕ್ಕಾಗ ಸರಿಯಾಗಿ ಜನ ಪರ ಕೆಲಸಗಳನ್ನು ಮಾಡಿದ್ರೆ ಇಷ್ಟೆಲ್ಲಾ ಸರ್ಕಸ್ ಮಾಡಬೇಕಾಗಿತ್ತ.

ಅಧಿಕಾರ ಸಿಕ್ಕಾಗ ಹಣ ಮಾಡುವುದರಲ್ಲಿಯೇ ಸಾಕಷ್ಟು ಶ್ರಮಹಾಕಿದ ರಾಜಕಾರಣಿಗಳು, ಗೆದ್ದಾಗ ವಿಧಾನ ಮಂಡಲದ ಅಧಿವೇಶನಗಳಲ್ಲಿ ಕೆಸರಾಟದಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ. ಇಲ್ಲವಾದರೆ ಹಾಜರಾಗುವುದಿಲ್ಲ. ಅಷ್ಟರಮಟ್ಟಿಗೆ ನಮ್ಮ ಜನಪ್ರತಿನಿಧಿಗಳು.

ಗೆಳೆಯರೇ, ಮತ್ತೆ ಚುನಾವಣೆ ಹತ್ತಿರ ಬಂದಿದೆ. ಯೋಚಿಸಿ ಮತಹಾಕಿ, ಯಾವುದೇ ಆಮಿಷಗಳಿಗೆ ಒಳಗಾಗದೇ ಒಳ್ಳೆಯವರನ್ನು ಆರಸಿ ವಿಧಾನಸಭೆಗೆ ಕಳುಹಿಸಿ ಇಲ್ಲವಾದರೆ ಮತ್ತೆ ರೆಡ್ಡಿವಚ್ಚೆ ಮೊದಲಟ್ಟೆ ಎಂಬ ಮಾತು..?

-ಸಂ