ಸಿರಿಗೆರೆ: ಈಗಿನ ಆಧುನಿಕ ಜೀವನ ಶೈಲಿಯಲ್ಲಿ ಮಾನವನು ತನ್ನ ಾರೋಗ್ಯ ಕಾಪಾಡಿಕೊಳ್ಳುವಲ್ಲಿ ವಿಫಲನಾಗುತ್ತಿದ್ದಾನೆ ಎಂದು ಅಳಗವಾಡಿ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಿ.ಬಿ. ನಾರದಮುನಿ ವಿಷಾದಿಸಿದರು.

ಸಿರಿಗೆರೆ ಸಮೀಪದ ಹಳವುದರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ ಹಾಗೂ ಅಳಗವಾಡಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಸಹಯೋಗದಲ್ಲಿ TSP ಯೋಜನೆಯಡಿ ನಡೆದ ಉಚಿತ ಆಯುಷ್ ಆರೋಗ್ಯ ಶಿಬಿರ-2017ನ್ನು ಉದ್ಧೇಶಿಸಿ ಅವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಮನುಷ್ಯ ನಾನಾ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇದನ್ನು ನಿಯಂತ್ರಿಸಲು ನಮ್ಮ ಪೂರ್ವಿಕರು ಕೊಟ್ಟ ಕೊಡುಗೆಯೆಂದರೆ ‘ಆಯುರ್ವೇದ’. ಈ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ರೋಗ ಬರದಂತೆ ಮತ್ತು ರೋಗ ಬಂದನಂತರ ಸೂಕ್ತ ಚಿಕಿತ್ಸೆ ಪಡೆದರೆ ಮನುಷ್ಯ ಆರೋಗ್ಯವಂತರೂ ಹಾಗೂ ಆಯುಷ್ಯವಂತರೂ ಆಗಿ ಸದೃಢ ಜೀವನ ನಡೆಸಬಹುದು ಎಂಬ ಸಲಹೆ ನೀಡಿದರು.

ಅಳಗವಾಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿಜಿಯಮ್ಮ ನರಸಿಂಹಮೂರ್ತಿ ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿದರು. ತಾಲ್ಲೂಕು ಪಂಚಾಯ್ತಿ ಸದಸ್ಯೆ ಲಕ್ಷ್ಮಮ್ಮ ಗಂಗಪ್ಪ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಸಾವಿತ್ರಬಾಯಿ ನಾಗರಾಜ್, ಸದಸ್ಯರಾದ ಲತಾ ನವೀನ್ ಕುಮಾರ್, ಶಿವಮೂರ್ತಿ, ಕಮಲಾನಾಯ್ಕ, ಗ್ರಾಮದ ಮುಖಂಡರಾದ ಸಿದ್ಧಲಿಂಗಪ್ಪ, ತಿಪ್ಪೇಸ್ವಾಮಿ, ರುದ್ರಪ್ಪ ಅವರು ಉಪಸ್ಥಿತರಿದ್ದರು.

ಶಿಬಿರದಲ್ಲಿ ತಜ್ಞ ವೈದ್ಯರುಗಳಾದ ಡಾ.ಬಿ. ಶಿವಕುಮಾರ್, ಡಾ.ಸಿ.ಎಲ್. ಉಮೇಶ್ ರೆಡ್ಡಿ, ಡಾ. ಉದಯ್ ಭಾಸ್ಕರ್, ಡಾ. ರಘುವೀರ್, ಡಾ. ಪ್ರಶಾಂತ್ ಹಾಗೂ ಡಾ. ಕಲ್ಪನಾ ಭಾಗವಹಿಸಿದ್ದರು.

ಎಂ.ಎಸ್. ಮಲ್ಲಿಕಾರ್ಜುನಸ್ವಾಮಿ ಸಿರಿಗೆರೆ
ಮೈಸೂರು