ಬೆಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ 19 ಚಿಕಿತ್ಸೆಗೆ ಕರ್ನಾಟಕ ಸರ್ಕಾರದಿಂದ ದರ ಪಟ್ಟಿ ನಿಗದಿ ಮಾಡಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಅದರ ವಿವರ ಈ ಕೆಳಕಂಡತಿದೆ. 
ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರ್‌ ಮಾಡಿರುವ ಸೋಂಕಿತರಿಗೆ ಒಂದು ದಿನದ ದರ:
ಜನರಲ್‌ ವಾರ್ಡ್‌- 5,200 ರೂ
ಎಚ್‌ಡಿಯು- 7,000 ರೂ
ಐಸೋಲೇಷನ್‌ ಐಸಿಯು (ವೆಂಟಿಲೇಟರ್‌ ರಹಿತ)- 8,500 ರೂ
ಐಸೋಲೇಷನ್‌ ಐಸಿಯು (ವೆಂಟಿಲೇಟರ್‌ ಸಹಿತ)-10,000 ರೂ

ನಗದು ಪಾವತಿ (ವಿಮೆ ಅಲ್ಲದ) ವಿಎಚ್‌ಪಿಗಳಿಂದ ನೇರವಾಗಿ ಪ್ರವೇಶ ಪಡೆಯುವವರ ದರ ಒಂದು ದಿನಕ್ಕೆ
ಜನರಲ್‌ ವಾರ್ಡ್‌- 10, 000 ರೂ.
ಎಚ್‌ಡಿಯು- 12,000 ರೂ.
ಐಸೋಲೇಷನ್‌ ಐಸಿಯು (ವೆಂಟಿಲೇಟರ್‌ ರಹಿತ)- 15,000 ರೂ
ಐಸೋಲೇಷನ್‌ ಐಸಿಯು (ವೆಂಟಿಲೇಟರ್‌ ಸಹಿತ)-25,000 ರೂ