ಚಿತ್ರದುರ್ಗ: ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ತ್ರಿಪುರ ಸುಂದರಿ ತಿಪ್ಪಿನಘಟ್ಟಮ ದೇವಸ್ಥಾನದಲ್ಲಿ ನ.೭ ಮತ್ತು ೮ ರಂದು ನಡೆಯುವ ನೂತನ ದೇವಾಲಯ ಲೋಕಾರ್ಪಣೆ, ಬ್ರಹ್ಮಕಲಶೋತ್ಸವ, ಅನ್ನಸಂರ್ಪಣೆ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.

ಇಂದು ಬೆಳಿಗ್ಗೆ ೮ ಕ್ಕೆ ತಿಪ್ಪಿನಘಟ್ಟಮ್ಮ ಜೋಗಿಮಟ್ಟಿ ರಸ್ತೆಯಲ್ಲಿರುವ ಮೂಲ ದೇವಸ್ಥಾನದಿಂದ ಮಂಗಳ ವಾದ್ಯದೊಂದಿಗೆ ಹಿಮತ್‌ಕೇತರಾಕ್ಕೆ ತೆರಳಿ ಗಂಗಾ ಪೂಜೆ ಸ್ವೀಕರಿಸಿ ಮಧ್ಯಾಹ್ನ ಮೂರಕ್ಕೆ ದೇವಸ್ಥಾನಕ್ಕೆ ಹಿಂದಿರುಗಲಿದೆ.

೮ ರಂದು ದೇವಿಯ ಪೂಜಾ ಕೈಂಕರ್ಯಗಳು ಆರಂಭಗೊಂಡು ಆಗ್ರೋದಕ, ಮಹಾ ಸಂಕಲ್ಪ ಗಣಪತಿ ಪೂಜೆ, ಶಿವ ಪಾರ್ವತಿ ನವದುರ್ಗ ಹೋಮ, ಗಣ ಹೋಮ, ಚಂಡಿಕಾ ಹೋಮ, ನವಗ್ರಹ ಹೋಮ, ಕಳಸಾರೋಹಣ ಪೂರ್ಣಾಹುತಿ, ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ಅನ್ನಸಂತರ್ಪಣೆಯಿರುತ್ತದೆ.
ಬ್ರಹ್ಮಕಲಶೋತ್ಸವಕ್ಕೆ ದೇವಸ್ಥಾನದ ಮೇಲ್ಬಾಗಕ್ಕೆ ಹೋಗಲು ಮರದ ಗೂಟಗಳನ್ನು ಮೆಟ್ಟಿಲು ರೀತಿಯಲ್ಲಿ ಕಟ್ಟಿ ವ್ಯವಸ್ಥೆ ಮಾಡಲಾಗಿದೆ.

ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು, ಮನ, ಧನದೊಂದಿಗೆ ಕೈಜೋಡಿಸುವಂತೆ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವಸ್ಥಾನ ಟ್ರಸ್ಟ್‌ನವರು ವಿನಂತಿಸಿದ್ದಾರೆ.