ಚಿತ್ರದುರ್ಗ: 4 ಕೋಟಿ ಬೆಲೆ ಬಾಳುವ ಗಾಂಜ ಬೆಳೆದು ಆಗಸ್ಟ್ 04 ರಂದು ರಾಂಪುರ ಪೊಲೀಸರ ದಾಳಿ ವೇಳೆ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ರುದ್ರೇಶ್ ನನ್ನು ಬಂಧಿಸಲಾಗಿದೆ. ಜೊತೆಗೆ 9871.73 ಕೆ.ಜಿ ತೂಕದ 8250 ಗಾಂಜಾ ಗಿಡಗಳನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ ಹೇಳಿದರು.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಂತಾಪುರ ಕೊರಚರಹಟ್ಟಿ ನಿವಾಸಿಯಾಗಿರು ರುದ್ರೇಶ್, ರಾಂಪುರದ ಬಳಿ ಜಮೀನು ಗುತ್ತಿಗೆ ಪಡೆದು ಗಾಂಜಾ ಬೆಳೆದಿದ್ದನು. ಇದು ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ.

ರಾಂಪುರದ ಡಿ.ಬಿ ಮಂಜುನಾಥ್, ವೈ.ಜಂಬುನಾಥ್, ಡಿ.ವೈ ಮಂಜುನಾಥ್ ಎಂಬುವರಿಗೆ ಸೇರಿದ 04 ಎಕರೆ 20 ಗುಂಟೆ ಜಮೀನಿನಲ್ಲಿ ಗಾಂಜಾ ಗಿಡ ಬೆಳೆದಿದ್ದು, ಮಧ್ಯವರ್ತಿ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಮಹದೇವಪುರ ನಿವಾಸಿ ಸಮಂತಗೌಡ ಜಮೀನನ್ನು ಗುತ್ತಿಗೆ ಕೊಡಿಸಿದ್ದನು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ರಾಂಪುರ ಠಾಣೆ ಪಿಎಸ್‌ಐ ಗುಡ್ಡಪ್ಪ ನೇತೃತ್ವದ ತಂಡ, ಜಮೀನು ಮಾಲೀಕರು, ಮಧ್ಯವರ್ತಿ ಸೇರಿದಂತೆ ಪ್ರಮುಖ ಆರೋಪಿ ರುದ್ರೇಶ್ ನನ್ನು ಬಂಧಿಸಿದ್ದಾರೆ. ಬಂಧಿತ ಐವರ ವಿರುದ್ಧ NDPS ಆಯಕ್ಟ್ ಕಲಂ 8 ಹಾಗಾ 20(a)(b) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ ಮಹಾನಿಂಗ ಬಿ. ನಂದಗಾವಿ ರವರ ಹಾಗೂ ಚಳ್ಳಕೆರೆ ಪೊಲೀಸ್ ಉಪ ಅಧೀಕ್ಷಕರವರಾದ ಮಾನ್ಯ ಶ್ರೀ ಕೆ.ವಿ. ಶ್ರೀಧರ್ ಇವರ ಮಾರ್ಗದರ್ಶನದಲ್ಲಿ ಮೊಳಕಾಲ್ಮೂರು ವೃತ್ತ ನಿರೀಕ್ಷಕರವರಾದ ಶ್ರೀ ಜಿ.ಬಿ. ಉಮೇಶ್  ಇವರ ನೇತೃತ್ವದಲ್ಲಿ ರಾಂಪುರ ಪೊಲೀಸ್ ಠಾಣೆಯ ಉಪ ನಿರೀಕ್ಷಕರವರಾದ ಶ್ರೀ ಎನ್. ಗುಡ್ಡಪ್ಪ, ಮೊಳಕಾಲ್ಮೂರು ಠಾಣೆಯ ಪಿ.ಎಸ್.ಐ ಶ್ರೀ ಎಂ.ಕೆ. ಬಸವರಾಜ್ ಮತ್ತು ರಾಂಪುರ ಠಾಣೆಯ ಸಿಬ್ಬಂದಿಯವರಾದ ಶ್ರೀ ಡಿ.ಎನ್. ಚಂದ್ರಪ್ಪ ಎ.ಎಸ್.ಐ, ಶ್ರೀ ಧರಣೇಶಪ್ಪ ಎ.ಎಸ್.ಐ, ಎನ್. ಬಸವರಾಜ್, ಆನಂದ್ ಟಿ.ಎಸ್, ಲೋಕೇಶ್, ಎನ್.ವೀರಣ್ಣ, ಜ್ಯೋತಿಗೌಡ, ಪ್ರೇಮ್ ಕುಮಾರ್, ಶಿವಣ್ಣ, ಎನ್.ಹೆಚ್ ಮಾಲತೇಶ್, ಬಿ. ತಿಮ್ಮಪ್ಪ, ಮೊಳಕಾಲ್ಮೂರು ವೃತ್ತ ಕಛೇರಿಯ ರಾಘವೇಂದ್ರರೆಡ್ಡಿ ಮೊಳಕಾಲ್ಮೂರು ಠಾಣೆಯ ದೇವರಾಜ್ ಜಿ.ಎಸ್ ಮತ್ತು ಚಾಲಕರಾದ ಚಿದಾನಂದ ಮತ್ತು ಸುದರ್ಶನರೆಡ್ಡಿ ರವರು  ಹಾಗೂ ಜಿಲ್ಲಾ ಸಶಸ್ತ್ರ ವಿಭಾಗದ ಎ.ಆರ್.ಎಸ್.ಐ ಗಳಾದ ತಿಪ್ಪೇಸ್ವಾಮಿ.ಇ ತಿಪ್ಪೇಸ್ವಾಮಿ, ಆರ್.ಟಿ.ರವಿಕುಮಾರ್ ಮತ್ತು ಸಿಬ್ಬಂದಿಯವರಾದ  ರೇವಣ್ಣ, ಖಾದರ್ ಭಾಷಾ, ಹನುಮಂತಬಾಬು, ಜಗದೀಶ್, ಅಶೋಕ್ ಗೋವಿಂದಪ್ಪ.ಎಸ್, ವೀರೇಶ್, ಅನ್ವರ್ ಪಾಷಾ, ಅಜ್ಜಯ್ಯ.ಇ, ಅರುಣ್ ಕುಮಾರ್, ದೀಪಕ್ ಕುಮಾರ್, ಸಂತೋಷ್ ಕುಮಾರ್ ನಾಗರಾಜ ಸಂಪನ್ನ ನಟರಾಜ.ಜಿ.ಟಿ ಇವರು ಭಾಗವಹಿಸಿದ್ದರು.