ಚಿತ್ರದುರ್ಗ: ಲಿಂಗೈಕ್ಯ ಮರುಳಾರಾಧ್ಯ ಶಿವಾಚಾರ್ಯ ಮಹಾ ಭಗವತ್ಪಾದರ ೨೩ನೇ ವರ್ಷದ ಪುಣ್ಯ ಸ್ಮರಣೋತ್ಸವ ಮಾ. ೨೨ರ ಬೆಳಿಗ್ಗೆ ೧೨ ಗಂಟೆಗೆ ನಗರದ ರಂಗಯ್ಯನ ಬಾಗಿಲ ಬಳಿಯ ಉಜ್ಜಯನಿ ಮಠದಲ್ಲಿ ಜನ ಜಾಗೃತಿ ಮತ್ತ ಧರ್ಮಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಈಶ್ವರ ಪ್ರಸಾದ್ ತಿಳಿಸಿದ್ದಾರೆ/

ಅಂದು ಬೆಳಿಗ್ಗೆ ಲಿ|| ಶ್ರೀಗಳವರ ಕರ್ತೃ ಗದ್ದುಗೆಗೆ ಹಾಗೂ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ಮಹಾ ರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ ೧೨ ಗಂಟಗೆ ನಡೆಯಲಿರುವ ಜನ ಜಾಗೃತಿ ಮತ್ತ ಧರ್ಮಸಭಾ ಕಾರ್ಯಕ್ರಮದ ಸಾನಿಧ್ಯವನ್ನು ಲಕ್ಷ್ಮೇಶ್ವರದ ಕರೆವಾಡಿ ಮಠದ ಶ್ರೀ ಮಳೆ ಮಲ್ಲಿಕಾರ್ಜನ ಶ್ರೀಗಳು, ಮುಸ್ಟೂರು ಓಂಕಾರೇಶ್ವರ ಮಠದ ಶ್ರೀ ರುದ್ರಮುನಿ ಶ್ರೀಗಳು, ಕೊಟ್ಟೂರು ಜಾನುಕೋಠಿಮಠದ ಶ್ರೀ ಸಿದ್ದಲಿಂಗ ಶ್ರೀಗಳು, ಹರಪನಹಳ್ಳಿಯ ತಗ್ಗಿನಮಠದ ಶ್ರೀ ವರಸದ್ದೋಜಾತ ಶ್ರೀಗಳು, ಕೋಣಂದೂರು ಬೃಹನ್ಮಠದ ಶ್ರೀ ಶ್ರೀಪತಿ ಪಂಡಿತಾರಾಧ್ಯ ಶ್ರೀಗಳು, ಉಕ್ಕಡಗಾತ್ರಿಯ ಶ್ರೀ ಹಾಲಶಂಕರ ಶ್ರೀಗಳು ಉಜ್ಜಯಿನಿ ಮಠದ ನಿಯೋಜಿತ ಉತ್ತರಾಧಿಕಾರಿಗಳಾದ ಶ್ರೀ ಅಭೀಷೇಕ ದೇವರು ಹಾಗೂ ಕಲ್ಲೇಶನಹಳ್ಳಿಯ ಶ್ರೀ ಗುರುಮರಳುಸಿದ್ದೇಶ್ವರ ಆಶ್ರಮದ ತಿಪ್ಪೇಸ್ವಾಮಿಯವರು ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.