ಚಿತ್ರದುರ್ಗ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಭರಮಸಾಗರ ಶಿಶು ಅಭಿವೃದ್ಧಿ ವ್ಯಾಪ್ತಿಯಡಿ  ಅಂಗನವಾಡಿ ಕಾರ್ಯಕರ್ತೆ ಮತ್ತು  ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಇದ್ದಲ್ಲಿ ಜುಲೈ 15 ರೊಳಗೆ ಸಲ್ಲಿಸಬಹುದು.

ಭರಮಸಾಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಆಕ್ಷೇಪಣೆಗಳಿದ್ದಲ್ಲಿ ಭರಮಸಾಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಜೆ.ಸಿ.ಆರ್ ಬಡಾವಣೆ, 3ನೇ ಕ್ರಾಸ್, ಗಣಪತಿ ದೇವಸ್ಥಾನದ ಹತ್ತಿರ, ಚಿತ್ರದುರ್ಗ ಇಲ್ಲಿಗೆ ಜು. 15 ರೊಳಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಹಿರಿಯೂರು: 

ಚಿತ್ರದುರ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಿರಿಯೂರು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಡಿ ಖಾಲಿಯಿರುವ 05 ಅಂಗನವಾಡಿ ಕಾರ್ಯಕರ್ತೆ ಮತ್ತು 05 ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ತಾತ್ಕಾಲಿಕ ಅಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಇದ್ದಲ್ಲಿ ಜುಲೈ 15 ರೊಳಗೆ ಸಲ್ಲಿಸಬಹುಹುದು.

ಹಿರಿಯೂರು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಬಬ್ಬೂರು ಫಾರಂ, ಚಿಲ್ಲಹಳ್ಳಿ ಅಂಬೇಡ್ಕರ್ ನಗರ, ಚಿತ್ರದೇವರಹಟ್ಟಿ, ದಿಬ್ಬಾರಹಟ್ಟಿ, ಕಣಜನಹಳ್ಳಿ ಉಪ್ಪಾರಹಳ್ಳಿಗಳಲ್ಲಿ ಕಾರ್ಯಕರ್ತೆಯರಿಗಾಗಿ ಹಾಗೂ ಕಂದೀಕೆರೆ-2, ಮಲ್ಲೇಣು ಕುವೆಂಪು ನಗರ, ಓಬಳಾಪುರ, ರಾಮಜೋಗಿಹಳ್ಳಿ, ಸಂತೇಪೇಟೆ-2 ವಾರ್ಡ್ ನಂ-16ಗಳಲ್ಲಿ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಈ ಹಿಂದೆ ಅರ್ಜಿ ಆಹ್ವಾನಿಸಲಾಗಿತ್ತು. ಹಿರಿಯೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಿರಿಯೂರು ಶಿಶು ಆಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ

ಚಳ್ಳಕೆರೆ: 

ಚಿತ್ರದುರ್ಗ:  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಚಳ್ಳಕೆರೆ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಡಿ 09 ಅಂಗನವಾಡಿ ಕಾರ್ಯಕರ್ತೆ ಮತ್ತು 15 ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಇದ್ದಲ್ಲಿ ಜುಲೈ 15 ರೊಳಗೆ ಸಲ್ಲಿಸಬಹುದು.

ಚಳ್ಳಕೆರೆ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿರುವ ಗಾಂಧಿನಗರ-ಬಿ, ಇಂಜಯ್ಯನಹಟ್ಟಿ-ಬಿ, ವಾಲ್ಮೀಕಿನಗರ, ಪುರ್ಲೆಹಳ್ಳಿ-ಎ, ನಾಯಕನಹಟ್ಟಿ ಆಸ್ಪತ್ರೆ ಮುಂಭಾಗ, ರೇಣುಕಾಪುರ-ಎ, ಹೊಟ್ಟೆಜ್ಜನಕಪಿಲೆ, ಪಿ.ಗೌರಿಪುರ-ಎ, ಕುರಿಬೊಮ್ಮಯ್ಯನಹಟ್ಟಿ.  ಸಹಾಯಕಿಯರ ಹುದ್ದೆಗಳಿರುವ ಹುಲಿಕುಂಟೆ-ಸಿ, ಗೌರಸಮುದ್ರ-ಬಿ, ಜಾಜೂರು-ಬಿ, ಕ್ಯಾತಗೊಂಡನಹಳ್ಳಿ-ಎ, ಕರೀಕೆರೆ-ಬಿ, ರಹಿಂನಗರ, ಬಂಗಾರುದೇವರಹಟ್ಟಿ, ನಾಯಕನಹಟ್ಟಿ ಕಾವಲು ಬಸವೇಶ್ವರ ನಗರ, ನಾಯಕನಹಟ್ಟಿ ಆಸ್ಪತ್ರೆ ಮುಂಬಾಗ, ಓಬಳಾಪುರ-ಎ, ಪಿ.ಮಹದೇವಪುರ-ಬಿ, ಕೊರ್ಲಕುಂಟೆ-ಬಿ, ಸಿದ್ದೇಶ್ವರನದುರ್ಗ-ಎ, ಗೋಸಿಕೆರೆ-ಎ, ತಳುಕುತಾಂಡಗಳಲ್ಲಿ ಹುದ್ದೆ ಭರ್ತಿ ಮಾಡಲು ಈ ಹಿಂದೆ ಅರ್ಜಿ ಆಹ್ವಾನಿಸಲಾಗಿತ್ತು.  ಇದೀಗ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಚಳ್ಳಕೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಚಳ್ಳಕೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ  ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.