ಹಾಲು ಉತ್ಪಾದಕರು ಗಮನಿಸ ಬೇಕಾದ ಸುದ್ದಿ.!

ಬೆಂಗಳೂರು: ಲಾಕ್ಡೌನ್ ಜಾರಿಯಲ್ಲಿರುವುದರಿಂದ ಅನೇಕ ಹಾಲು ಒಕ್ಕೂಟಗಳಲ್ಲಿ ಕೆಲವು ಸಮಯ ಹಾಲು ಖರೀದಿ ನಿಲ್ಲಿಸಿದ್ದರಿಂದ ಉತ್ಪಾದಕರಿಗೆ ಸಮಸ್ಯೆಯಾಗಿದೆ.

ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿದ್ದು ಸಿಎಂ ಯಡಿಯೂರಪ್ಪ ಸೂಚನೆಯಂತೆ ಎಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ದಿನಕ್ಕೆ ಎರಡು ಬಾರಿ ಹಾಲು ಖರೀದಿಸಲು ಕ್ರಮಕೈಗೊಳ್ಳಲಾಗಿದೆ.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೂಚನೆಯಂತೆ ಎಲ್ಲಾ ಹಾಲು ಉತ್ಪಾದಕರಿಂದ ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಪ್ರತಿದಿನ 2 ಸಲ ಗುಣಮಟ್ಟದ ಹಾಲು ಖರೀದಿಸಲಾಗುವುದು. ಏಪ್ರಿಲ್ ಅಂತ್ಯದವರೆಗೆ ಪ್ರತಿಟನ್ ಪಶು ಆಹಾರಕ್ಕೆ 500 ರೂಪಾಯಿಯಿಂದ ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಕಾಯಂ ಸಿಬ್ಬಂದಿಗೆ ನಿತ್ಯ ಒಂದು ದಿನದ ಹೆಚ್ಚುವರಿ ವೇತನ ಅಥವಾ ಪರಿಹಾರ ರಜೆ, ಗುತ್ತಿಗೆ ನೌಕರರಿಗೆ ಪ್ರತಿದಿನ 500 ರೂಪಾಯಿ ಹೆಚ್ಚುವರಿ, ಹಾಲು ಮತ್ತು ಹಾಲು ಉತ್ಪನ್ನ ಸಾಗಣೆ ಸಿಬ್ಬಂದಿಗೆ ಪ್ರೋತ್ಸಾಹ ಧನ ರೂಪದಲ್ಲಿ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.