ಚಿತ್ರದುರ್ಗ: ವಿಶ್ವ ಬಾಯಿ ಆರೋಗ್ಯದ ನಿಮಿತ್ತ ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾಮಾನ್ಯಜನರಲ್ಲಿ ಬಾಯಿ ಹಾಗೂ ದಂತ ಆರೋಗ್ಯದ ಅರಿವು ಮೂಡಿಸಲು ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ಮತ್ತು ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಬೀದಿನಾಟಕವನ್ನು ಪ್ರದರ್ಶಿಸಿದರು.
ಬೀದಿನಾಟಕದಲ್ಲಿ ತಂಬಾಕು ಮತ್ತು ಸಿಗರೇಟಿನಿಂದ ಆಗುವ ದುಷ್ಪರಿಣಾಮಗಳು ಹಾಗೂ ಸರಿಯಾಗಿ ಹಲ್ಲನ್ನುಉಜ್ಜದಿದ್ದರೆ ಹಲ್ಲುಗಳಿಗೆ ಆಗುವ ತೊಂದರೆಗಳ ಬಗ್ಗೆ ಜನರಿಗೆಅರಿವು ಮೂಡಿಸಿದರು.ಇದೇ ಸಂದರ್ಭದಲ್ಲಿವಿ.ಪಿ.ಎಕ್ಸ್‌ಟೆನ್ಷೆನ್‌ನಲ್ಲಿರುವಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಹಲ್ಲಿನ ಮತ್ತು ಬಾಯಿ ಆರೋಗ್ಯದ ಮಾಹಿತಿಯನ್ನು ನೀಡಲಾಯಿತು ಮತ್ತು ೧೧೫ ಮಕ್ಕಳಿಗೆ ಉಚಿತದಂತತಪಾಸಣೆಯನ್ನು ಮಾಡಲಾಯಿತು.

 

ಕಾರ್ಯಕ್ರಮದಲ್ಲಿಎಸ್.ಜೆ.ಎಂ.ವಿದ್ಯಾಪೀಠದಕಾರ್ಯನಿರ್ವಾಹಕ ನಿರ್ದೇಶಕರಾದಡಾ||.ಈ.ಚಿತ್ರಶೇಖರ್, ಪ್ರಾಚಾರ್ಯರಾದಡಾ||ಗೌರಮ್ಮ, ಡಾ||ಪಾಲಾಕ್ಷಪ್ಪ, ಡಾ||ನಾಗರಾಜಪ್ಪ, ಡಾ||ಜಯಚಂದ್ರ, ಡಾ||ಸಚಿನ್‌ನಾಯ್ಕ, ಡಾ||ನಾರಾಯಣಮೂರ್ತಿ, ಡಾ||ವಿಶ್ವನಾಥ ಮತ್ತುಸುಧಾನಾಗರಾಜ್‌ಇದ್ದರು.