ಚಿತ್ರದುರ್ಗ:ಕೋವಿಡ್ 19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ವಿಧಿಸಲಾಗಿದ್ದ ಲಾಕ್‍ಡೌನ್ ನಿಂದಾಗಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಹಣ್ಣು ಮತ್ತು ತರಕಾರಿ ಬೆಳೆಗಳು ಮಾರಾಟವಾಗದೆ ನಷ್ಟ ಅನುಭವಿಸಿರುವ ಬೆಳೆಗಾರರಿಗೆ ಒಂದು ಹೆಕ್ಟೇರ್‍ಗೆ ಗರಿಷ್ಠ 15000 ರೂ. ಮೀರದಂತೆ ಹಾಗೂ ಕನಿಷ್ಠ 2000 ರೂ ಪರಿಹಾರ ನೀಡುವ ಯೋಜನೆ ಜಾರಿಗೊಳಿಸಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಜೂ. 15 ಕೊನೆಯ ದಿನವಾಗಿದೆ.

ಬಾಳೆ, ಪಪ್ಪಾಯ, ಅಂಜೂರ, ಹಾಗೂ ತರಕಾರಿ ಬೆಳೆಗಳಾದ ಟೊಮೇಟೊ, ಹಸಿರು ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಸಿಹಿಕುಂಬಳ, ಬೂದಕುಂಬಳ, ಕ್ಯಾರೇಟ್, ಈರುಳ್ಳಿ, ದಪ್ಪ ಮೆಣಸಿನಕಾಯಿ ಬೆಳೆಗಾರರಿಗೆ ಮಾತ್ರ ಆದ ನಷ್ಟಕ್ಕೆ ಪರಿಹಾರಧನ ಘೋಷಿಸಲಾಗಿದೆ.  ಫಲಾನುಭವಿಗಳನ್ನು 2019-2020 ಸಾಲಿನಲ್ಲಿ ಕೈ ಗೊಳ್ಳಲಾದ ಹಿಂಗಾರು, ಮುಂಗಾರು ಬೆಳೆ ಸಮೀಕ್ಷೆಯ ವರದಿಯಂತೆ ಆಯ್ಕೆ ಮಾಡಲಾಗುವುದು. ಆದರೆ ಕಲ್ಲಂಗಡಿ, ಕರಬೂಜ ಬೇಸಿಗೆ ಬೆಳೆಗಳಾಗಿದ್ದು  ಈ ಬೆಳೆ ಸಮೀಕ್ಷೆ ನಮೂದಾಗಿಲ್ಲದಿದ್ದಲ್ಲಿ, ಅಂತಹ ರೈತರು ಅಗತ್ಯ ದಾಖಲಾತಿಗಳಾದ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.   ಜೂ.15 ರೊಳಗೆ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ, ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಚಿತ್ರದುರ್ಗ 08194-230141. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಚಿತ್ರದುರ್ಗ 08194-231480, ಚಳ್ಳಕೆರೆ 08195-250432, ಹಿರಿಯೂರು 08193-260305, ಹೊಳಲ್ಕೆರೆ 08191-276370, ಹೊಸದುರ್ಗ 08197-230790, ಮೊಳಕಾಲ್ಮೂರು 08198-229080 ಕ್ಕೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕಿ ಸವಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.