ಮೈಸೂರು: ಸೈಕಲ್ ಬಳಸಿ; ಪರಿಸರ ಉಳಿಸಿ, ಎಂಬ ಧ್ಯೇಯ ವಾಕ್ಯದೊಂದಿಗೆ ರಾಜ್ಯಾದ್ಯಂತ ಕಳೆದ ಎರಡು ವರ್ಷಗಳಿಂದ ಸುಮಾರು ಹತ್ತು ಸಾವಿರ ಕಿಲೋಮೀಟರ್ ಗಳಿಗೂ ಹೆಚ್ಚು ದೂರ ಸೈಕಲ್ ಪ್ರವಾಸ ಕೈಗೊಂಡಿರುವ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಮಲ್ಲೂರಹಟ್ಟಿಯ ಕುಮಾರ ಎಚ್.ಪಿ. ತಿಪ್ಪೇಶ ಅವರು ಪ್ರವಾಸ ಮತ್ತು ಪರಿಸರ ಜಾಗೃತಿ ಅಂಗವಾಗಿ ಮೈಸೂರಿನ ಪ್ರತಿಷ್ಠಿತ ಡಿ. ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿಗೆ ಭೇಟಿ ನೀಡಿದ್ದರು.

ಶ್ರೀಯುತರನ್ನು ಧರ್ಮಪ್ರಕಾಶ ಡಿ. ಬನುಮಯ್ಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ಹಾಗೂ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಸಹಾಯಕ ಪ್ರಾಧ್ಯಾಪಕರೂ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿಗಳಾದ ಡಾ. ಕೆ. ಶ್ರೀನಿವಾಸ ಅವರು ವೈಯಕ್ತಿಕವಾಗಿ ಗೌರವಿಸಿ ಹೆಚ್ಚಿನ ಸಾಧನೆ ಮಾಡುವಂತೆ ಸಲಹೆ ನೀಡಿ ಬೀಳ್ಕೊಟ್ಟರು.

 

  • ಮಲ್ಲಿಕಾರ್ಜುನಸ್ವಾಮಿ ಎಂ.ಎಸ್. ಸಿರಿಗೆರೆ/ಮೈಸೂರು