ಚಿತ್ರದುರ್ಗ: ಆರ್ಥಿಕ ಸಂಕಷ್ಟದಿಂದಾಗಿ ಗ್ರಾಮಾಂತರ ಪ್ರದೇಶದಲ್ಲಿನ ಸಾಕಷ್ಟು ವಿದ್ಯಾರ್ಥಿಗಳು ಮಧ್ಯದಲ್ಲೇ ಶಾಲೆಗಳಿಂದ ಹೊರಗುಳಿಯುವಂತಹ  ಪರಿಸ್ಥಿತಿ ಇದೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತ ರಾಗಬಾರದೆಂದು ಹೇಳಿದರು.
ವೇದಾಂತ-ಸೇಸಾ ಗೋವಾ ಐರನ್ ಓರ್ ಕರ್ನಾಟಕ ಘಟಕವು ಚಿತ್ರದುರ್ಗ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ತನ್ನ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ವಿದ್ಯಾರ್ಥಿ ವೇತನ ವಿತರಣೆ ಮಾಡಿದ ಸಂದರ್ಭದಲ್ಲಿ ಮಾತನಾಡುತ್ತಾ, ವೇದಾಂತ ಸಂಸ್ಥೆಯ ಆರ್ಥಿಕ ನೆರವಿನಿಂದ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗುತ್ತಿದೆ. ಈ ಆರ್ಥಿಕ ನೆರವನ್ನು ಸದ್ಬಳಕೆ ಮಾಡಿಕೊಂಡು ಉನ್ನತ ವ್ಯಾಸಂಗ ಮಾಡುವ ಮೂಲಕ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ವೇದಾಂತದ ಸಿಎಸ್‌ಆರ್ ಯೋಜನೆಗಳಾದ ಸ್ಮಾರ್ಟ್‌ಕ್ಲಾಸ್, ನಂದಘರ್ ಮತ್ತು ಬಯೋಟಾಯ್ಲೆಟ್ಸ್‌ನಂತಹ ಕಾರ್ಯಕ್ರಮಗಳು ಹೆಣ್ಣು ಮಕ್ಕಳ ಶಿಕ್ಷಣ ಮುಂದುವರಿಕೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿವೆ” ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಬೊಮ್ಮೇನಹಳ್ಳಿ ಗ್ರಾಮಪಂಚಾಯ್ತಿಯ ಉಪಾಧ್ಯಕ್ಷ ಮಂಜಣ್ಣ, ಗ್ರಾಮಗಳ ರಾಯಭಾರಿಗಳು, ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಪೋಷಕ ವೃಂದ ಹಾಗೂ ವೇದಾಂತದ ಅಧಿಕಾರಿಗಳು ಹಾಜರಿದ್ದರು.
ಚಿತ್ರದುರ್ಗ ವಿಭಾಗದ ಗಣಿಗಾರಿಕೆ ನಡೆಯುತ್ತಿರುವ ಭಾಗವಾದ ಭೀಮಸಮುದ್ರ, ಚಿಕ್ಕೇನಹಳ್ಳಿ, ಮುತ್ತುಗದೂರು, ಸಾಸಲು, ಹಳೆ ರಂಗಾಪುರ, ಕಡ್ಲೆಗುಡ್ಡು, ಮೇಗಲಹಳ್ಳಿ, ಬೊಮ್ಮೇನಹಳ್ಳಿ, ಹಾಲುವುದರ ಮತ್ತು ವಿ.ಪಾಳ್ಯ ಸೇರಿದಂತೆ ೧೦ ಗ್ರಾಮಗಳ ೨೦ ಪ್ರತಿಭಾನ್ವಿತ ಹೆಣ್ಣು ಮಕ್ಕಳನ್ನು ಈ ವಿದ್ಯಾರ್ಥಿ ವೇತನಕ್ಕೆಆಯ್ಕೆ ಮಾಡಲಾಗಿದೆ. ವಿದ್ಯಾರ್ಥಿಗಳ ವ್ಯಕ್ತಿಗತ ಪ್ರತಿಭೆ ಮತ್ತು ಶೈಕ್ಷಣಿಕಗುಣಮಟ್ಟವನ್ನು ಪರಿಗಣಿಸಿ ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುತ್ತದೆ.