ಬೆಳಗಾವಿ : ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಬೆಳಗಾವಿಯ ರೈತ ಮಹಿಳೆ ಜಯಶ್ರೀ ಹಾಗೂ ಹಲವು ಮಹಿಳಾ ಸಂಘಟನೆಯ ಮಹಿಳೆಯರು ಪ್ರಚಾರಕ್ಕೆ ಹೊಂಟಿದ್ದಾರೆ.

ರೈತ ಮಹಿಳೆ ಜಯಶ್ರೀ ಹೇಳಿದ್ದು ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ಕುಟುಂಬ ರಾಜಕಾರಣವನ್ನು ಒದ್ದು ಓಡಿಸಲು ನಾವು ಕೂಡ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಈಗಾಗಲೇ ಮಂಡ್ಯದ ಹಲವು ರೈತ ಸಂಘಟನೆ ಮುಖಂಡರು ಕೂಡ ಜಯಶ್ರೀ ಅವರನ್ನು ಸಂಪರ್ಕ ಮಾಡಿದ್ದು, ಪ್ರಚಾರಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ ಎಂಬುದು ಸುದ್ದಿ.!